ಉಪ್ಪಳ: ಮಂಗಲ್ಪಾಡಿ ಪಂಚಾಯತ್ನ ಹನುಮಾನ್ ನಗರ ಸಮುದ್ರ ತೀರ ಪ್ರದೇಶದಲ್ಲಿ ರಾಶಿಬಿದ್ದಿರುವ ತ್ಯಾಜ್ಯದಿಂದ ಸ್ಥಳೀಯರಿಗೆ ಸಮಸ್ಯೆ ಉಂಟಾಗಿರುವುದಾಗಿ ದೂರಲಾಗಿದೆ.
ಹೆದ್ದಾರಿ ಬದಿಯ ಸರ್ವೀಸ್ ರಸ್ತೆಯ ವಿವಿಧೆಡೆ ತ್ಯಾಜ್ಯ ಉಪೇಕ್ಷಿಸುತ್ತಿರುವುದು ದಿನನಿತ್ಯ ವ್ಯಾಪಕಗೊಂಡಿರುವ ಮಧ್ಯೆ ಸಮುದ್ರ ತೀರದಲ್ಲಿ ಕೂಡಾ ತ್ಯಾಜ್ಯವನ್ನು ಉಪೇಕ್ಷಿಸುವುದು ಆರಂಭಗೊAಡಿದೆ. ಈ ಪರಿಸರದಲ್ಲಿ ಹಸಿರು ಕ್ರಿಯÁ ಸೇನೆ ಕಾರ್ಯಕರ್ತೆಯರಿಗೆ ತ್ಯಾಜ್ಯ ಸಂಗ್ರಹಿಸಿಡಲು ಇರಿಸಲಾದ ಪೆಟ್ಟಿಗೆಯ ಪರಿಸರದಲ್ಲಿಯೇ ತ್ಯಾಜ್ಯ ಉಪೇಕ್ಷಿಸಲಾಗುತ್ತಿದೆ. ವಿವಿಧ ಫ್ಯ್ಲಾಟ್ಗಳ ತ್ಯಾಜ್ಯವನ್ನು ತಂದು ಉಪೇಕ್ಷಿಸುತ್ತಿರುವುದಾಗಿ ಸ್ಥಳೀಯರು ದೂರಿದ್ದಾರೆ. ಈಗ ಸಮುದ್ರ ತೀರ ಪ್ರದೇಶ ತ್ಯಾಜ್ಯದಿಂದ ಊರವರಿಗೂ ಹಾಗೂ ಪ್ರವಾಸಿಗರಿಗೂ ಸಮಸ್ಯೆ ಉಂಟÁಗಿದೆ. ಸಂಬAಧಪಟ್ಟ ಅಧಿಕಾರಿಗಳು ತ್ಯಾಜ್ಯ ಉಪೇಕ್ಷಿಸುವವರ ವಿರುದ್ದ ಕ್ರಮಕ್ಕೆ ಸ್ಥಳೀಯರು ಒತ್ತಾಯಿಸಿದ್ದಾರೆ.






