ಕುಣಿಯದಲ್ಲಿ ಬೀದಿ ನಾಯಿಗಳ ಕಾಟ: 18ಕೋಳಿಗಳ ಕೊಂದ ನಾಯಿ ಹಿಂಡು

ಕಾಸರಗೋಡು: ಪುಲ್ಲೂರು ಪೆರಿಯ ಪಂಚಾಯತ್‌ನ ಕುಣಿಯದಲ್ಲಿ ಬೀದಿ ನಾಯಿಗಳ ಉಪಟಳ ತೀವ್ರಗೊಂಡಿದೆ ಎಂದು ದೂರಲಾಗಿದೆ. ಶಾಲೆ, ಮದ್ರಸ ವಿದ್ಯಾರ್ಥಿಗಳು ಭೀತಿಯೊಂದಿಗೆ ಪ್ರಯಾಣಿಸುತ್ತಿದ್ದಾರೆ. ಈ ಮಧ್ಯೆ ಪುಣಿಯ ತೆಕ್ಕೇಕುನ್‌ನ ನಾಸರ್‌ರ ಮನೆಯಂಗಳದಲ್ಲಿ ಕೋಳಿಗೂಡನ್ನು ಹಾನಿಗೊಳಿಸಿದ ಬೀದಿನಾಯಿಗಳ ಹಿಂಡು 18 ಕೋಳಿಗಳನ್ನು ತಿಂದಿದೆ. 

ನಾಲ್ಕು ಕೋಳಿಗಳನ್ನು ಬೀದಿನಾಯಿಗಳು ಕಚ್ಚಿಕೊಂಡು ಹೋಗಿರುವುದಾಗಿಯೂ ಮನೆ ಮಂದಿ ತಿಳಿಸಿದ್ದಾರೆ. ಇಂದು ಬೆಳಿಗ್ಗೆ ನಾಯಿಗಳ ಉಪಟಳ ತೀವ್ರಗೊಂಡಿ ರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

RELATED NEWS

You cannot copy contents of this page