ಮಜಲ್ ರಸ್ತೆ ಸಂಚಾರಯೋಗ್ಯಗೊಳಿಸಲು ಪಂ. ಉಪಾಧ್ಯಕ್ಷೆಯಿಂದ ಮುಖ್ಯಮಂತ್ರಿಗೆ ಮನವಿ

ಕಾಸರಗೋಡು: ಮೊಗ್ರಾಲ್ ಪುತ್ತೂರು ಪಂಚಾಯತ್‌ನ ಮಜಲ್ ರಸ್ತೆಯನ್ನು ಸಂಚಾರಯೋಗ್ಯ ಗೊಳಿಸಬೇಕೆಂದು ಪಂಚಾಯತ್ ಉಪಾಧ್ಯಕ್ಷೆ ಅರ್ಫಾನಾ ನಜೀಬ್ ಮುಖ್ಯಮಂತ್ರಿ ವಿ.ಡಿ. ಸತೀಶನ್, ಲೋಕೋಪಯೋಗಿ ಇಲಾಖೆ ಸಚಿವ ಪಿ.ಕೆ. ಬಶೀರ್, ಚೀಫ್ ಇಂಜಿನಿಯರ್, ಜನಪ್ರತಿನಿಧಿಗಳು ಎಂಬಿವರಲ್ಲಿ ಮನವಿ ಮೂಲಕ ಆಗ್ರಹಿಸಿದ್ದಾರೆ.

ಕಳೆದ ೮ ವರ್ಷದಿಂದ ದುರಸ್ತಿ ನಡೆಸದೆ ಉಪೇಕ್ಷಿಸಿರುವ ರಸ್ತೆ ಅಪಘಾತ ಭೀತಿಯೊಡ್ಡುತ್ತಿದೆ. ವಿದ್ಯಾರ್ಥಿಗಳು, ವೃದ್ದರು, ಸ್ಥಳೀಯರು ಈ ರಸ್ತೆಯಲ್ಲಿ ಸಂಚರಿಸುವುದಕ್ಕೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಚರಂಡಿಯ ಅಭಾವ ರಸ್ತೆಯನ್ನು ಶೋಚನೀಯಗೊಳಿಸಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಮಜಲ್ ನಿವಾಸಿಗಳ ಹಲವು ಕಾಲದ ಬೇಡಿಕೆಗೆ ಶೀಘ್ರವೇ ಪರಿಹಾರ ಕೈಗೊಳ್ಳಬೇಕೆಂದು, ರಸ್ತೆಯಲ್ಲಿ ಸುಗಮ ಸಂಚಾರ ವ್ಯವಸ್ಥೆ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

RELATED NEWS

You cannot copy contents of this page