ಸೌರ ದೀಪಗಳ ಬ್ಯಾಟರಿ ಕಳವು: ಮೂವರ ಸೆರೆ

ಕಾಸರಗೋಡು: ಸೌರ ದೀಪಗಳ ಪ್ಯಾನಲ್‌ಗಳಿಗೆ ಅಳವಡಿಸುವ ಬ್ಯಾಟರಿ ಗಳನ್ನು ಕಳವುಗೈಯ್ಯುವ ತಂಡಕ್ಕೆ ಸೇರಿದ ಅಸ್ಸಾಂ ನಿವಾಸಿಗಳಾದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಅಸ್ಸಾಂ ನಿವಾಸಿಗಳು ಹಾಗೂ ಈಗ ಪಡನ್ನಕ್ಕಾಡಿನಲ್ಲಿ ವಾಸಿಸುವ ರೌಫಿಕುಲ್ ಇಸ್ಲಾಂ (41), ನಬಿಪರಮಾಣಿಕ್ (45) ಮತ್ತು ಅಲ್ ಜಾಫಿದುಲ್ ಇಸ್ಲಾಂ (28) ಬಂಧಿತ ಆರೋಪಿಗಳಾಗಿದ್ದಾರೆ. ವಲಿಯ ಪರಂಬು ಗ್ರಾಮ ಪಂಚಾಯತ್‌ನ ಮಾವಿಲಕಡಪ್ಪುರಂ ಬಿಚ್ಚಾರಕಡವು ಪಾಡಲ್ ಕಡಪ್ಪುರ, ವಲಿಯಪ ರಂಬು ಮತ್ತು ವಲಿಯಪರಂಬು ಸೇತುವೆ ಎಂಬಿಡೆಗಳಲ್ಲಿ ಸ್ಥಾಪಿಸಲಾಗಿ ರುವ ಸೌರ ದೀಪದ ಪ್ಯಾನಲ್‌ಗಳಿಂದ ೮೦,೦೦೦ ರೂ. ಮೌಲ್ಯದ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರೋನಿಕ್ಸ್ ಬ್ಯಾಟರಿಗಳನ್ನು  ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಈ ಮೂವರನ್ನು ಬಂಧಿಸಲಾಗಿದೆ. ಈ ಬಗ್ಗೆ ಪಂಚಾಯತ್ ಕಾರ್ಯದರ್ಶಿ ಜಿಮ್ಮಿ ಜೋಸ್ ಚಂದೇರ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ನಡೆಸಿದ ತನಿಖೆಯಲ್ಲಿ ಈ ಮೂವರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಸಫಲರಾಗಿದ್ದಾರೆ ಬಂಧಿತರನ್ನು ನಂತರ ಹೊಸದುರ್ಗ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರುಪಡಿಸಿ ನ್ಯಾಯಾಂಗ ಬಂಧನದಲ್ಲಿರಿ ಸಲಾಯಿತು.

ಇದೇ ರೀತಿ ಇತರ ಪ್ರದೇಶಗಳಲ್ಲಿ ಸೌರ ದೀಪದ ಬ್ಯಾಟರಿಗಳನ್ನು ಕಳವುಗೈಯ್ಯಲಾಗಿದೆಯೇ, ಈ ಕಳವು ತಂಡದಲ್ಲಿ ಇತರ ಯಾರಾದರೂ ಶಾಮೀಲಾಗಿದ್ದಾರೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ಆರಂಭಿಸಿದ್ದಾರೆ.

RELATED NEWS

You cannot copy contents of this page