ಶಬರಿಮಲೆ ಚಿನ್ನ ಕಳವು: ಮುಜರಾಯಿ ಮಂಡಳಿ ಮಾಜಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಎಸ್‌ಐಟಿ ವಶಕ್ಕೆ

ತಿರುವನಂತಪುರ: ಶಬರಿಮಲೆ ದೇಗುಲದಲ್ಲಿ ನಡೆದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ತಿರುವಿದಾಂಕೂರ್ ಮುಜರಾಯಿ ಮಂಡಳಿಯ ಮಾಜಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್‌ರನ್ನು ವಿಶೇಷ ತನಿಖಾ ತಂಡ ಇಂದು ಬೆಳಿಗ್ಗೆ ವಶಕ್ಕೆ ತೆಗೆದುಕೊಂಡಿದೆ. ಮಾತ್ರವಲ್ಲ ಅವರನ್ನು  ತಿರುವನಂತಪುರದಲ್ಲಿರುವ ಕ್ರೈಂ ಬ್ರಾಂಚ್ ಕಚೇರಿಗೆ ಸಾಗಿಸಿ  ಅಧಿಕಾರಿಗಳು   ವಿಚಾರಣೆಗೊಳಪಡಿಸತೊಡಗಿದ್ದಾರೆ. ಶಬರಿಮಲೆ ದೇಗುಲದ ಗರ್ಭಗುಡಿಯ ದ್ವಾರಪಾಲಕ ಮೂರ್ತಿಗಳ  ಚಿನ್ನ ಲೇಪಿತ ಕವಚಗಳನ್ನು 2025ರಲ್ಲಿ ಕಾನೂನು ಉಲ್ಲಂಘಿಸಿ ಮರು  ಲೇಪನಗೊಳಿಸುವ ಹೆಸರಲ್ಲಿ ಅವುಗಳನ್ನು ಚೆನ್ನೈಗೆ ಸಾಗಿಸಿದ  ಪ್ರಕರಣದಲ್ಲಿ ಪಿ.ಎಸ್. ಪ್ರಶಾಂತ್ ಸೇರಿದಂತೆ ಏಳು ಮಂದಿಯ ಕೈವಾಡವಿದೆ ಯೆಂದು ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಕಳೆದ ತಿಂಗಳು ರಾಜ್ಯ ಹೈಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದ್ದರು. 2019ರಲ್ಲಿ  ಶಬರಿಮಲೆ ದೇಗುಲದಲ್ಲಿ ನಡೆದ ಚಿನ್ನ ಕಳವು ಹಾಗೂ ಅದಕ್ಕಾಗಿ ಅಂದು ನಡೆದ ಅವ್ಯವಹಾರಗಳನ್ನು ಮರೆಮಾಚುವ ಉದ್ದೇಶದಿಂದ ಶಬರಿಮಲೆ ಕ್ಷೇತ್ರದ ಗರ್ಭಗುಡಿಯ ದ್ವಾರದ ಚಿನ್ನ ಲೇಪಿತ ಕವಚಗಳನ್ನು  ಚೆನ್ನೈಗೆ ಸಾಗಿಸಿ ಅದಕ್ಕೆ ಮರುಲೇಪನಗೊಳಿಸಲಾಗಿತ್ತೆಂಬುವುದನ್ನು ತನಿಖಾ ತಂಡ ಪತ್ತೆಹಚ್ಚಿದೆ. ಅಂದು ತಿರುವಿದಾಂಕೂರು ಮಂಡಳಿಯ ಸದಸ್ಯರಾಗಿದ್ದ ಎ. ಅಜಿ ಕುಮಾರ್,  ಪ್ರಾಯೋಜಕ ಉಣ್ಣಿಕೃಷ್ಣನ್ ಪೋತ್ತಿ, ಶಬರಿಮಲೆ ತಂತ್ರಿ ಕಂಠರರ್ ರಾಜೀವರ್,  ಶಬರಿಮಲೆ ಎಕ್ಸಿಕ್ಯೂಟಿವ್ ಆಫೀಸರ್ ಆಗಿದ್ದ ಮುರಾರಿ ಬಾಬು, ತಿರುವಾಭರಣ ಆಯುಕ್ತರಾಗಿದ್ದ ರಜಿಲಾಲ್ ಮತ್ತು ಚಿನ್ನ ಲೇಪನಗೊಳಿಸಿದ ಚೆನ್ನೈಯ ಸ್ಮಾರ್ಟ್ ಕ್ರಿಯೇಶನ್ಸ್ ಸಂಸ್ಥೆಯ ಮಾಲಕ ಪಂಕಜ್ ಭಂಡಾರಿ ಈ ಪ್ರಕರಣದ ಇತರ ಆರೋಪಿಗಳಾಗಿದ್ದಾರೆ.

RELATED NEWS

You cannot copy contents of this page