ಚಾಲಕ ಅಸ್ವಸ್ಥ: ನಿಯಂತ್ರಣ ತಪ್ಪಿದ ಸಾರಿಗೆ ಬಸ್ ಢಿಕ್ಕಿ ಹೊಡೆದು ಪಾದಚಾರಿ ಮಹಿಳೆ ಮೃತ್ಯು

ತೃಶೂರು: ಚಾಲಕನಿಗೆ ಅಸ್ವಸ್ಥತೆ ಉಂಟಾದ ಹಿನ್ನೆಲೆಯಲ್ಲಿ ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್ ಢಿಕ್ಕಿ ಹೊಡೆದು ಪಾದಚಾರಿ ಮಹಿಳೆ ಮೃತಪಟ್ಟರು. ಕಾಞೂರು ನಿವಾಸಿ ಬಿಂದು (49) ಮೃತಪಟ್ಟ ಮಹಿಳೆ.

ಇಂದು ಬೆಳಿಗ್ಗೆ ೭ ಗಂಟೆ ವೇಳೆ ಪುದುಕ್ಕಾಡ್‌ನಲ್ಲಿ ಅಪಘಾತ ಸಂಭವಿಸಿದೆ. ನಡೆದುಕೊಂಡು ಹೋಗುತ್ತಿದ್ದ ಈಕೆಗೆ ಬಸ್ ಢಿಕ್ಕಿ ಹೊಡೆದ ಬಳಿಕ ಮುಂದುವರಿದು ಸಾಗಿದ ಬಸ್ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿರುವ ಅಂಗಡಿಗೆ ನುಗ್ಗಿದೆ. ಚಾಲಕ ಸೀಟ್‌ನಲ್ಲಿ ಕುಸಿದು ಬಿದ್ದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಸ್ಥಳಕ್ಕೆ ತಲುಪಿದವರು ಚಾಲಕನನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರು.

You cannot copy contents of this page