ದೈಗೋಳಿಯ ಸೇವಾಶ್ರಮದಿಂದ ವ್ಯಕ್ತಿ ನಾಪತ್ತೆ

ಉಪ್ಪಳ: ಕೊಡ್ಲಮೊಗರು ದೈಗೋಳಿಯಲ್ಲಿರುವ ಸಾಯಿ ನಿಕೇತನ್  ಸೇವಾಶ್ರಮದ ನಿವಾಸಿಯೋರ್ವ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಉತ್ತರಪ್ರದೇಶದ ಆಗ್ರ ಪ್ರಯಾಗ್‌ರಾಜ್ ನಿವಾಸಿ ವಿಷ್ಣು  ಕುಮಾರ್ (25) ನಾಪತ್ತೆಯಾದ ವ್ಯಕ್ತಿ.  ಆಶ್ರಮದ ನೌಕರ  ಕೆ.ಆದಿಶ್ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಕಳೆದ ಗುರುವಾರ ಬೆಳಿಗ್ಗೆ ೮ರಿಂದ ಮಧ್ಯಾಹ್ನ ೨ ಗಂಟೆ ಮಧ್ಯೆಗಿನ ಸಮ ಯದಲ್ಲಿ ವಿಷ್ಣುಕುಮಾರ್ ನಾಪತ್ತೆ ಯಾಗಿರುವುದಾಗಿ ತಿಳಿಸಲಾಗಿದೆ. ದೈಗೋಳಿಯಲ್ಲಿ ತಿರುಗಾಡುತ್ತಿದ್ದ ವಿಷ್ಣುಕುಮಾರ್‌ರನ್ನು ಒಂದು ತಿಂಗಳ ಹಿಂದೆ ಸೇವಾಶ್ರಮಕ್ಕೆ ಸೇರಿಸಲಾಗಿತ್ತು.

RELATED NEWS

You cannot copy contents of this page