ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮಗು ಹಾವು ಕಚ್ಚಿ ಮೃತ್ಯು

ಮಲಪ್ಪುರಂ: ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗು ಹಾವಿನ ಕಡಿತದಿಂದ ಮೃತಪಟ್ಟ ದಾರುಣ ಘಟನೆ ನಡೆದಿದೆ. ಮಲಪ್ಪುರಂ ಬಳಿಯ ಕೊಂಡೋಟಿ ಪುಳಿಕ್ಕಲ್ ನಲ್ಲಿ ಈ ಘಟನೆ ಸಂಭವಿಸಿದೆ. ಪೆರಿಂದಲ್‌ಮಣ್ಣ ತೂತ ನಿವಾಸಿ ಸುಹೈಲ್-ಜಂಶಿಯ ದಂಪತಿಯ ಪುತ್ರ ಮಹಮ್ಮದ್ ಉಮರ್ ಮೃತಪಟ್ಟ ಮಗುವಾಗಿದೆ. ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವಿಗೆ ಹಾವಿನ ಕಡಿತವುಂಟಾ ಗಿದೆ. ಮಗುವಿನ ಕೂಗು ಕೇಳಿ ಸಂಬಂಧಿಕರು ತಲುಪಿ ನೋಡಿದಾಗ ಕಾಲಿನಲ್ಲಿ ಹಾವಿನ ಕಡಿತದ ಗಾಯ ಕಂಡುಬಂದಿದೆ. ಕೂಡಲೇ ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ದರೂ ಜೀವ ರಕ್ಷಿಸಲಾಗಲಿಲ್ಲ.

RELATED NEWS

You cannot copy contents of this page