ತಾಯಿ, ಮಗಳ ಮನೆಗಳಿಗೆ ನುಗ್ಗಿದ ಕಳ್ಳರು: ಚಿನ್ನಾಭರಣ ಕಳವು

ಬದಿಯಡ್ಕ: ಒಂದೇ ಹಿತ್ತಿಲಿನಲ್ಲಿರುವ ತಾಯಿ ಹಾಗೂ ಮಗಳ ಮನೆಗಳಿಗೆ ಕಳ್ಳರು ನುಗ್ಗಿ ಚಿನ್ನಾಭರಣ ದೋಚಿದ್ದಾರೆ.  ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಚರ್ಲಡ್ಕದಲ್ಲಿರುವ ಮನೆಗಳಿಂದ ಕಳವು ನಡೆದಿದೆ. ಚರ್ಲಡ್ಕದ ಮರಿಯಮ್ಮ ಹಾಗೂ ಅವರ ಪುತ್ರಿ ಆಯಿಶಾನ ಎಂಬಿವರ ಮನೆಗಳಿಗೆ ಕಳ್ಳರು ನುಗ್ಗಿದ್ದು ಒಟ್ಟು 7 ಪವನ್ ಚಿನ್ನಾಭರಣ ಕಳವಿಗೀಡಾಗಿ ರುವುದಾಗಿ ಸೂಚನೆಯಿದೆ. ಈ ಎರಡು ಮನೆಗಳಿಗೆ ಬೀಗ ಜಡಿದು ಕುಟುಂಬ ಎರಡು ದಿನಗಳ ಹಿಂದೆ ಸಂಬಂಧಿಕರ ಮನೆಗೆ ತೆರಳಿದ್ದರು. ನಿನ್ನೆ ಸಂಜೆ ಮರಳಿ ಬಂದಾಗಲೇ ಮನೆಗೆ ಕಳ್ಳರು ನುಗ್ಗಿದ ವಿಷಯ ಅರಿವಿಗೆ ಬಂದಿದೆ. ಎರಡೂ ಮನೆಗಳ ಮುಂಭಾಗದ ಬಾಗಿಲುಗಳು ಮುರಿದ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಈ ಬಗ್ಗೆ ಲಭಿಸಿದ ಮಾಹಿತಿಯಂತೆ ಬದಿಯಡ್ಕ ಪೊಲೀಸರು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದ್ದಾರೆ.  ಕಳ್ಳರ ಪತ್ತೆಗಾಗಿ ಶೋಧ ಆರಂಭಿಸಲಾಗಿದೆ.

You cannot copy contents of this page