ಚರಿತ್ರೆಯನ್ನು ರಾಜಕೀಯ ಕನ್ನಡಕದ ಮೂಲಕ ನೋಡಬಾರದು- ಎನ್‌ಟಿಯು

ಕಾಸರಗೋಡು: ಚರಿತ್ರೆಯನ್ನು  ರಾಜಕೀಯ ಕನ್ನಡಕದ ಮೂಲಕ ನೋಡಬಾರದೆಂದು ಎನ್‌ಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಅನೂಪ್ ಕುಮಾರ್ ನುಡಿದರು. ಕುಂಬಳೆ ಉಪಜಿಲ್ಲೆಯಲ್ಲಿ ನಡೆದ ಶಾಲಾ ಮಟ್ಟದ ಫ್ರೀಡಂ ಕ್ವಿಜ್ ಸ್ಪರ್ಧೆಯ ಒಂದು ಪ್ರಶ್ನೆಯಲ್ಲಿ ವೀರ ಸಾವರ್ಕರ್‌ರ ಹೆಸರು ಉತ್ತರವಾಗಿ ಬಂದಿರುವ ಹೆಸರಲ್ಲಿ ಅಧ್ಯಾಪಕನ ವಿರುದ್ಧ ಕೈಗೊಂಡ ಅಮಾನತು ಸಹಿತವಿರುವ ಶಿಸ್ತು ಕ್ರಮ ಹಿಂತೆಗೆಯಬೇಕೆಂದು ಆಗ್ರಹಿಸಿ ಎನ್‌ಟಿಯು ನಡೆಸಿದ ಕಾಸರಗೋಡು ಡಿಡಿಇ ಕಚೇರಿ ಮಾರ್ಚ್, ಧರಣಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಚರಿತ್ರೆಯ ಒಂದು ಅಂಶ ರಸಪ್ರಶ್ನೆ ಯಲ್ಲಿ ಉಪಯೋಗಿಸಿರುವುದನ್ನು ಅಷ್ಟು ದೊಡ್ಡ ಅಪರಾಧವಾಗಿ ಕಾಣುತ್ತಿರುವು ದನ್ನು ಅಂಗೀಕರಿಸಲು ಸಾಧ್ಯವಿಲ್ಲ. ಕೇರಳದ ಎಲ್ಲರೂ ಸಾವರ್ಕರ್‌ರ ರಾಜಕೀಯ ಆಶಯಗಳನ್ನು ಬೆಂಬಲಿಸ ದಿರಬಹುದು. ಆದರೆ ಭಾರತದ ಚರಿತ್ರೆಯ ವ್ಯಕ್ತಿತ್ವ ಎಂಬ ನೆಲೆಯಲ್ಲಿ ಅವರನ್ನು ಇತಿಹಾಸದಿಂದ ಹೊರತುಪಡಿಸಲು ಯಾರಿಗೂ ಸಾಧ್ಯವಿಲ್ಲವೆಂದು ಅವರು ನುಡಿದರು.

ರಸಪ್ರಶ್ನೆ ಸ್ಪರ್ಧೆಯಲ್ಲಿ ತಪ್ಪುಗಳುಂ ಟಾಗಿದ್ದರೆ ಅದನ್ನು ಪರಿಶೀಲಿಸಿ ತಿದ್ದಬೇಕಾಗಿದ್ದು, ಅಗತ್ಯವಿದ್ದರೆ ಅದರ ಮೂಲವನ್ನು ಪತ್ತೆಹಚ್ಚಬೇಕಾಗಿದ್ದು ಆದರೆ ಯಾವುದೇ ಸಮಗ್ರ ತನಿಖೆ ಪೂರ್ತಿಯಾಗುವುದರ ಮುಂಚಿತ ಅಧ್ಯಾ ಪಕನ ವಿರುದ್ಧ ಮಾತ್ರ ಕ್ರಮ ಕೈಗೊಂಡಿ ರುವುದು ಅಧ್ಯಾಪಕ ಸಮೂಹಕ್ಕೆ ಭಯದ ವಾತಾವರಣ ಸೃಷ್ಟಿಸಬಹುದೆಂದು ಅವರು ಆರೋಪಿಸಿದರು. ರಾಷ್ಟ್ರೀಯತೆ ಯಾವುದೇ ಒಂದು ಪಕ್ಷದ ಸೊತ್ತಲ್ಲವೆಂದು ಭಾರತದ ಚರಿತ್ರೆ ವಿವಿಧ ಆಶಯಗಳ, ವ್ಯಕ್ತಿತ್ವಗಳ ಕೊಡುಗೆಯ ಮೂಲಕ ರೂಪುಗೊಂಡಿರು ವುದಾಗಿಯೂ ಅವರು ನುಡಿದರು.

ವೀರ ಸಾವರ್ಕರ್‌ರ ಹೆಸರಲ್ಲಿ ಪೋರ್ಟ್ ಬ್ಲೆಯರ್‌ನಲ್ಲಿ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣವಿದ್ದು, ಭಾರತದ ಪ್ರಥಮ ಮಹಿಳಾ ಪ್ರಧಾನಮಂತ್ರಿ ಇಂದಿರಾಗಾಂಧಿ ಸಾವರ್ಕರ್‌ರ ಹೆಸರಲ್ಲಿ ಅಂಚೆ ಚೀಟಿಯನ್ನು ಹೊರ ತಂದಿರುವುದಾಗಿ ಅವರು ನುಡಿದರು. ಕಾರ್ಯಕ್ರಮದಲ್ಲಿ ಟಿ. ಕೃಷ್ಣನ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್, ರಾಜ್ಯ ಉಪಾಧ್ಯಕ್ಷ ಕೆ. ಪ್ರಭಾಕರನ್ ನಾಯರ್, ಮಹಿಳಾ ವಿಭಾಗ ರಾಜ್ಯ ಜೊತೆ ಸಂಚಾಲಕಿ ಎ. ಸುಚಿತ, ಎನ್. ರಂಜಿತ್, ಒ. ಸತೀಶ್ ಕುಮಾರ್, ಕೆ. ಅರವಿಂದಾಕ್ಷ ಭಂಡಾರಿ, ಪಿ. ಬಾಲಕೃಷ್ಣ ಮಾತನಾಡಿದರು.

RELATED NEWS

You cannot copy contents of this page