ಪ್ರತಿಭಟನೆ: ಬಿಜೆಪಿ ಜಿಲ್ಲಾಧ್ಯಕ್ಷೆ ಸೇರಿ 10 ಮಂದಿ ವಿರುದ್ಧ ಪ್ರಕರಣ ದಾಖಲು

ಕುಂಬಳೆ: ಕುಂಬಳೆ ಜಿಎಚ್‌ಎಸ್‌ಎಸ್‌ನಲ್ಲಿ ನಿನ್ನೆ ಶಿಕ್ಷಣ ಸಚಿವರ ಎನ್. ಶಂಸುದ್ದೀನ್ ಭಾಗವಹಿಸಿದ  ಕಾರ್ಯಕ್ರಮದ ಬಳಿ ಪ್ರತಿಭಟನೆ ನಡೆಸಿದ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಸೇರಿದಂತೆ ಹತ್ತು ಮಂದಿ ವಿರುದ್ಧ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ಜಿಲ್ಲಾಧ್ಯಕ್ಷೆಯ ಹೊರತಾಗಿ ಬಿಜೆಪಿ ಇತರ ನೇತಾರರಾದ ಪಿ.ಆರ್. ಸುನಿಲ್, ಅಶ್ವಿನಿ, ಅಜಿ ಕುಮಾರ್, ಸಂದೀಪ್, ವಿಕ್ರಂ ಪೈ ಹಾಗೂ  ಇತರ ಐದು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಚಿವರು ಭಾಗವಹಿಸಿದ ಈ ಕಾರ್ಯ ಕ್ರಮ ನಡೆಯುತ್ತಿದ್ದ ಶಾಲೆಯ ಪ್ರವೇಶದ್ವಾರದತ್ತ ಪ್ರತಿಭಟನಾ ಮೆರಣಿಗೆಯೊಂದಿಗೆ ಬಂದು ದಿಗ್ಬಂಧನ ನಡೆಸಿ ಸಾರ್ವಜನಿ ಕರ ಸಂಚಾರಕ್ಕೆ ಅಡಚಣೆ ಸೃಷ್ಟಿಸಿದ ಆರೋಪದಂತೆ ಹತ ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ವೀರ ಸಾವರ್ಕರ್‌ರನ್ನು ಸಚಿವ ಅವಮಾನಿಸಿದ್ದಾರೆಂದೂ ಆದ್ದರಿಂದ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಸಚಿವರ ಕಾರ್ಯಕ್ರಮ ಸ್ಥಳಕ್ಕೆ ಮೆರವಣಿಗೆ ನಡೆಸಿದ್ದರು.

RELATED NEWS

You cannot copy contents of this page