ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಸಾಧಕಾಭಿವಂದನಂ ಅಭಿಯಾನಕ್ಕೆ ಚಾಲನೆ

ಬದಿಯಡ್ಕ: ಸೇವಾ ಕ್ಷೇತ್ರದ ಸಾಧನೆ ಹಾಗೂ ಪಡಿತರ ವಿತರಣೆ ವ್ಯವಸ್ಥೆಯಲ್ಲಿ ೫೦ ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ ಕಿನ್ನಿಂಗಾರು ವಸಂತ್ ಶೆಣೈ- ಸುಧಾ ವಿ. ಶೆಣೈ ದಂಪತಿಯನ್ನು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ನಿನ್ನೆ ಅವರ ಮನೆಯಲ್ಲಿ ಗೌರವಿಸಲಾಯಿತು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈಯ್ಯುವವರನ್ನು ಅಭಿನಂದಿಸುವ ಅಕಾಡೆಮಿಯ ಸರಣಿ ಕಾರ್ಯಕ್ರಮಕ್ಕೆ ಈ ವೇಳೆ ಚಾಲನೆ ನೀಡಲಾಯಿತು. ನಿವೃತ್ತ ತಹಶೀಲ್ದಾರ್ ನಾರಾಯಣ ಗೋಸಾಡ ಉದ್ಘಾಟಿಸಿದರು.

ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಜಿಲ್ಲಾ ಕಾರ್ಯದರ್ಶಿ ಕುಂಜಾರು ಮೊಹಮ್ಮದ್ ಹಾಜಿ ಅಭಿನಂದಿಸಿದರು. ಚನಿಯಪ್ಪ ನಾಯ್ಕ ಅಧ್ಯಕ್ಷತೆ ವಹಿಸಿದರು. ತಾರಾನಾಥ ರೈ, ಸತೀಶ್ ರೈ ಗೋಸಾಡ, ಶ್ರೀಧರ್ ರೈ, ಮೋಹನ, ಪುಷ್ಪಾವತಿ, ಹರೀಶ್ ಗೋಸಾಡ, ವೀಜಿ ಕಾಸರಗೋಡು, ಅಖಿಲೇಶ್ ನಗುಮುಗಂ ಭಾಗವಹಿಸಿದರು.

RELATED NEWS

You cannot copy contents of this page