ನವದೆಹಲಿ: ಶಬರಿಮಲೆ ದೇಗುಲಕ್ಕೆ ಯುವತಿಯರ ಪ್ರವೇಶ ಸೇರಿದಂತೆ ಧಾರ್ಮಿಕ ನಂಬುಗೆಗೆ ಅನ್ವಯಿಸಿರುವ ಇತರ ಏಳು ವಿಷಯಗಳ ಕುರಿತಾದ ಅರ್ಜಿಗಳ ಮೇಲಿನ ತೀರ್ಪನ್ನು ಸುಪ್ರೀಂ ಕೋರ್ಟ್ನ ನವ ಸದಸ್ಯರ ಸಂವಿಧಾನ ಪೀಠ ಅಕ್ಟೋಬರ್ನಲ್ಲಿ ನೀಡಲಿದೆ. ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಈ ಬಗ್ಗೆ ಪೂರ್ವ ಮಾಹಿತಿ ನೀಡಿದ್ದಾರೆ.
ಬಿಹಾರಿನ ಬೋದ್ಗಯ ಕ್ಷೇತ್ರದ ಆಡಳಿತ ಸಮಿತಿಗೆ ಸಂಬಂಧಪಟ್ಟ ಪ್ರಕರಣದ ಅರ್ಜಿಯನ್ನು ಪರಿಶೀಲಿಸು ತ್ತಿದ್ದ ವೇಳೆ ಈ ಮಾಹಿತಿ ನೀಡಿದ್ದಾರೆ. ಮಾತ್ರವಲ್ಲ ಬೋದ್ಗಯ ಕ್ಷೇತ್ರದ ಆಡಳಿತ ಸಮಿತಿಯ ಪ್ರಕರಣದ ವಿಚಾರಣೆಯನ್ನು ಶಬರಿಮಲೆ ದೇಗುಲಕ್ಕೆ ಸಂಬಂಧಿಸಿದ ಪ್ರಕರಣದ ತೀರ್ಪಿನ ನಂತರ ಕೈಗೆತ್ತಿಕೊಳ್ಳಲಾಗು ವುದೆಂದೂ ಅವರು ಹೇಳಿದ್ದಾರೆ.
ಧಾರ್ಮಿಕ ಸ್ವಾತಂತ್ರ್ಯ, ಅದರ ಹಕ್ಕು, ನಂಬುಗೆ ಮತ್ತ್ತು ಆಚಾರಗಳಿಗೆ ಸಂಬಂಧಿಸಿದ ಏಳು ಅರ್ಜಿಗಳ ಮೇ ಲಿನ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ಇತ್ತೀಚೆಗೆ ೧೬ ದಿನಗಳ ತನಕ ನಡೆದಿತ್ತು. ನಂತರ ಅದರ ತೀರ್ಪನ್ನು ನೀಡುವ ದಿನಾಂಕವನ್ನು ಮೇ ೧೪ಕ್ಕೆ ನಿಗದಿಪಡಿ ಸಲಾಗಿತ್ತು. ಈಮಧ್ಯೆ ದಾವೋದಿ ಬೋರಾ ಸಮುದಾಯ ಹಾಗೂ ಬೋರ ಸಮುದಾಯಕ್ಕೆ ಸೇರಿದ ವ್ಯಕ್ತ್ತಿಯನ್ನು ವಿವಾಹವಾದ ಪಾರ್ಸಿ ಮತದ ಮಹಿಳೆಯೋರ್ವೆ ಯನ್ನು ಅವರ ಪಾರ್ಸಿ ಆರಾಧನಾಲಯಕ್ಕೆ ಪ್ರವೇಶಿಸು ವುದಕ್ಕೆ ತಡೆಯೊಡ್ಡಿದ ಅರ್ಜಿಯ ವಾದಗಳೂ ಸುಪ್ರೀಂಕೋರ್ಟ್ನಲ್ಲಿ ನಡೆದಿತ್ತು.
ಈ ಏಳೂ ವಿಷಯಗಳಲ್ಲಿ ಸುಪ್ರೀಂ ಕೋರ್ಟ್ನ ನವ ಸದಸ್ಯ ಸಂವಿಧಾನ ಪೀಠದ ತೀರ್ಪು ಹೊರಬಂದ ಬಳಿಕ ವಷ್ಟೇ ಶಬರಿಮಲೆ ದೇವಸ್ಥಾನಕ್ಕೆ ಯುವತಿಯರ ಪ್ರವೇಶಕ್ಕೆ ಅನುಕೂಲ ಕರವಾಗಿ ಸುಪ್ರೀಂಕೋರ್ಟ್ ಈ ಹಿಂದೆ ನೀಡಿದ್ದ ಆ ತೀರ್ಪನ್ನು ಮರುಪರಿಶೀಲಿ ಸಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ಮೇಲಿನ ವಾದ ಪ್ರತಿವಾದ ಗಳನ್ನು ಸುಪ್ರೀಂಕೋರ್ಟ್ನ ಪಂಚ ಸದಸ್ಯ ಪೀಠ ಆಲಿಸಿ ಅಂತಿಮ ನಿಗಮ ನಕ್ಕೆ ಬರಲಿದೆ. ಆ ಬಳಿಕ ಈ ಎಲ್ಲಾ ಏಳು ವಿಷಯಗಳಿಗೆ ಸಂಬಂಧಿಸಿದ ತೀರ್ಪನ್ನು ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ಸುಪ್ರೀಂಕೋ ರ್ಟ್ನ ಸಂವಿಧಾನ ಪೀಠ ನೀಡಲಿದೆ.






