ನಕಲಿ ಚಿನ್ನ ಅಡವಿರಿಸಿ 5.75 ಲಕ್ಷ ರೂ. ಸಾಲ ಪಡೆದು ವಂಚನೆ: ಇಬ್ಬರ ವಿರುದ್ಧ ಪ್ರಕರಣ ದಾಖಲು

ಕಾಸರಗೋಡು: ಸಹಕಾರಿ ಸೊಸೈಟಿಯಲ್ಲಿ ನಕಲಿ ಚಿನ್ನದೊಡವೆ ಗಳನ್ನು ಅಡವಿರಿಸಿ 5.75 ಲಕ್ಷ ರೂ.ಸಾಲ ಪಡೆದು ವಂಚನೆಗೈದ ದೂರಿನಂತೆ ಇಬ್ಬರ ವಿರುದ್ಧ ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚಂದ್ರಗಿರಿ ಕೀಯೂರು ಹೌಸ್‌ನ ತಾಜುದ್ದೀನ್ (47)ಮತ್ತು ಚಾತಂಗೈ ಮಣಿಯರದ ಕೆ. ಸಂತೋಷ (39) ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಳನಾಡಿನಲ್ಲಿರುವ ಚೆಮ್ನಾಡ್ ಪಂಚಾಯತ್ ವನಿತಾ ಸರ್ವೀಸ್ ಸೊಸೈಟಿಯಲ್ಲಿ ನಕಲಿ ಚಿನ್ನ ಅಡವಿರಿಸಿ ಸಾಲ ಪಡೆದಿರುವುದಾಗಿ ಆರೋಪಿಸಿ ಪ್ರಸ್ತುತ ಸೊಸೈಟಿಯ ಕಾರ್ಯದರ್ಶಿ ಎ. ಉಷಾ ಕುಮಾರಿ ನೀಡಿದ ದೂರಿನಂತೆ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿಗಳ ಪೈಕಿ ತಾಜುದ್ದೀನ್ ಕಳೆದ ಮಾರ್ಚ್ 23, 26, ಎಪ್ರಿಲ್ 16 ಮತ್ತು ಜೂನ್ 2 ಎಂಬೀ ದಿನಗಳಲ್ಲಾಗಿ ಒಟ್ಟು 48.21 ಗ್ರಾಂ ನಕಲಿ ಚಿನ್ನ ಅಡವಿರಿಸಿ 4,40,000 ರೂ. ಸಾಲ ಪಡೆದು ವಂಚಿಸಿದ್ದಾ ನೆಂದು ದೂರಿನಲ್ಲಿ ತಿಳಿಸಲಾಗಿದೆ. ಇದೇ ರೀತಿ ಇನ್ನೋರ್ವ ಆರೋಪಿ ಸಂತೋಷ್ ಮೇ ೪ರಂದು 15.6 ಗ್ರಾಂ ನಕಲಿ ಚಿನ್ನ ಅಡವಿರಿಸಿ 1.35 ಲಕ್ಷ ರೂ. ಸಾಲ ಪಡೆದು ವಂಚಿಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.ಮೇಲ್ಪರಂಬ ಠಾಣೆಯ ಎಸ್‌ಐ ಟಿ.ಅಖಿಲ್ ಈ ಪ್ರಕರಣದ ತನಿಖೆ  ಆರಂಭಿಸಿದ್ದಾರೆ.

RELATED NEWS

You cannot copy contents of this page