ಎಂಡಿಎಂಎ ಸಹಿತ ಸೆರೆಗೀಡಾದ ಯೂತ್ ಕಾಂಗ್ರೆಸ್ ಕಾರ್ಯಕರ್ತ ಪಕ್ಷದಿಂದ ಹೊರಕ್ಕೆ

ಕಾಸರಗೋಡು: ಕಾಲಿಕ್ಕಡವಿನಲ್ಲಿ ಎಂಡಿಎಂಎ ಸಹಿತ ಸೆರೆಗೀಡಾದ ಯೂತ್ ಕಾಂಗ್ರೆಸ್ ಕಾರ್ಯಕರ್ತನನ್ನು ಪಕ್ಷದಿಂದ ಹೊರಹಾಕಲಾಗಿದೆ. ಪೆರುಂಬಾವೂರ್ ವಲಿಯಕುಳಂ ಯೂನಿಟ್ ಸದಸ್ಯ ಮುಹಮ್ಮದ್ ಹುಸೈನ್   ಈ ತಿಂಗಳ ೯ರಂದು ಎಂಡಿಎಂಎ ಸಹಿತ ಸೆರೆಗೀಡಾಗಿ ದ್ದನು.  ಅದೇ ದಿನದಂದು ಈತ ನನ್ನು ಪಕ್ಷದ ಪ್ರಾಥಮಿಕ ಸದಸ್ಯ ತ್ವದಿಂದ ಹೊರ ಹಾಕಲಾಗಿ ದೆಯೆಂದು ಯೂತ್ ಕಾಂಗ್ರೆಸ್ ಎರ್ನಾಕುಳಂ ಜಿಲ್ಲಾಧ್ಯಕ್ಷ ಸಿಜೋ ಜೋಸೆಫ್ ತಿಳಿಸಿದ್ದಾರೆ.

139.29 ಗ್ರಾಂ ಎಂಡಿಎಂಎ ಸಹಿತ ಪೆರುಂಬಾವೂರು ಅರಕ್ಕಪ್ಪಡಿ ನಿವಾಸಿಗಳಾದ ಪಿ.ಎ. ಅಬ್ದುಲ್ ಸಲಾಂ (27), ಕೆ.ಎಚ್. ಮುಹಮ್ಮದ್ ಹುಸೈನ್ (28), ಪಿ.ಎ. ಅಬ್ಬಾಸ್ (50) ಎಂಬಿವರು ಕಾಲಿಕಡವಿನಲ್ಲಿ ಸೆರೆಗೀಡಾಗಿದ್ದರು. ಮುಖ್ಯಮಂತ್ರಿ ವಿ.ಡಿ. ಸತೀಶನ್ ಸಹಿತ ಕಾಂಗ್ರೆಸ್ ನೇತಾರರೊಂದಿಗೆ  ಆರೋಪಿ ಮುಹಮ್ಮದ್ ಹುಸೈನ್  ನಿಂತಿರುವ  ದೃಶ್ಯಗಳು ವ್ಯಾಪಕವಾಗಿ  ಪ್ರಚಾರವಾಗಿತ್ತು.  ಮುಖ್ಯಮಂತ್ರಿಯ ಸೋಶ್ಯಲ್ ಮೀ ಡಿಯಾ ಕೋ-ಆರ್ಡಿನೇಟರ್ ಆಗಿರು ವುದಾಗಿ ಆರೋಪಿ ತನ್ನನ್ನು ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದನು.  ಆರೋ ಪಿ  ಮುಖ್ಯಮಂತ್ರಿಯ ಕಚೇರಿಯ ನಿತ್ಯ ಸಂದರ್ಶಕನಾಗಿದ್ದಾನೆಂದೂ ಎಂ.ವಿ. ಗೋವಿಂದನ್ ಆರೋಪಿಸಿದ್ದರು. ಆದರೆ ಆರೋಪಿಗೆ ಸೋಶ್ಯಲ್ ಮೀಡಿಯಾ ಕೋ-ಆರ್ಡಿನೇಟರ್ ಹೊಣೆಗಾರಿಕೆ ನೀಡಿಲ್ಲವೆಂದು ಸಚಿವ ಒ.ಜೆ. ಜನೀಶ್ ತಿಳಿಸಿದ್ದಾರೆ.  ತನ್ನೊಂದಿಗೆ ಹಾಗೂ ಮುಖ್ಯಮಂತ್ರಿಯೊಂದಿಗೆ ನಿಂತು ಫೋಟೋ ತೆಗೆಯುವುದನ್ನು ತಡೆಯಲು ಸಾಧ್ಯವಿಲ್ಲ. ಮಾದಕ ವಸ್ತು ವಿರುದ್ಧ ಸರಕಾರ  ಕಠಿಣ ಕ್ರಮ ಕೈಗೊಳ್ಳುತ್ತಿದೆಯೆಂದು ಶಾಸಕ ಮುಹಮ್ಮದ್ ಶಿಯಾಸ್ ತಿಳಿಸಿದ್ದಾರೆ. ಮುಹಮ್ಮದ್ ಹುಸೈನ್‌ನ ಸೋಶ್ಯಲ್ ಮೀಡಿಯಾ ಪ್ರೊಫೈಲ್‌ನಲ್ಲಿ ಮುಖ್ಯಮಂತ್ರಿಯೊಂದಿಗೆ ನಿಂತಿರುವ ಹಲವು ಚಿತ್ರಗಳಿವೆ.  ಆಪರೇಶನ್ ತೂಫಾನ್‌ಗೆ ಸಂಬಂಧಿಸಿ ಪೆರುಂಬಾವೂರ್‌ನಲ್ಲಿ   ಗೃಹ ಸಚಿವ ರಮೇಶ್ ಚೆನ್ನಿತ್ತಲ ಪಾಲ್ಗೊಂಡ ಕಾರ್ಯಕ್ರಮದ ಸಂಘಾಟಕರಲ್ಲಿ ಮುಹಮ್ಮದ್ ಹುಸೈನ್ ಕೂಡಾ ಒಳಗೊಂಡಿದ್ದನು.

RELATED NEWS

You cannot copy contents of this page