ಚಾಲಕನನ್ನು ಹೊರಗಿಳಿಸಿ ಕಾರು ಅಪಹರಣ

ಕುಂಬಳೆ: ಕಾರು ತಡೆದು ನಿಲ್ಲಿಸಿ ಚಾಲಕನನ್ನು ಹೊರಗಿಳಿಸಿದ ಬಳಿಕ ಕಾರನ್ನು ಅಪಹರಣಗೈದ ಬಗ್ಗೆ ದೂರಲಾಗಿದೆ. ಕುಂಬಳೆ ಪೂಕಟ್ಟೆ ನಿವಾಸಿ ಮೊಹಮ್ಮದ್ ಸಯ್ಯೀದ್ ಮುಸಮ್ಮಿಲ್ ಎಂಬವರು ಈ ಬಗ್ಗೆ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ. ನಿನ್ನೆ ರಾತ್ರಿ 11 ಗಂಟೆಗೆ ದೂರುಗಾರ ಚಲಾಯಿಸುತ್ತಿದ್ದ ಕಾರನ್ನು ಖಾದರ್ ಎಂಬ ವ್ಯಕ್ತಿ ಹಿಂಬಾಲಿಸಿದ್ದಾನೆ. ಬಳಿಕ ಸೀತಾಂಗೋಳಿಯಲ್ಲಿ ಕಾರನ್ನು ತಡೆದು ನಿಲ್ಲಿಸಿ ಚಾಲಕನನ್ನು ಹೊರಗಿಳಿಸಿದ ಬಳಿಕ ವ್ಯಕ್ತಿ ಕಾರನ್ನು ಅಪಹರಣಗೈದಿರುವುದಾಗಿ ದೂರಲಾಗಿದೆ. ಟಾಟಾ ಟಿಯಾಗೊ ಇಲೆಕ್ಟ್ರಿಕ್ ಕಾರನ್ನು ಅಪಹರಣಗೈದಿದ್ದು,  ಚಟ್ಟಂಚಾಲ್‌ಗೆ ತಲುಪಿದಾಗ ಕಾರಿನ ಚಾರ್ಜ್ ಮುಗಿದಿದ್ದು, ಇದರಿಂದ ಕಾರು ಅಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ಮಾಹಿತಿ ಲಭಿಸಿದೆ ಎಂದು ಹೇಳಲಾಗುತ್ತಿದೆ.

RELATED NEWS

You cannot copy contents of this page