139.29 ಗ್ರಾಂ ಎಂಡಿಎಂಎ ಪತ್ತೆ ಪ್ರಕರಣ: ತನಿಖೆಗೆ ಡಿವೈಎಸ್‌ಪಿ ನೇತೃತ್ವದ 17 ಪೊಲೀಸರನ್ನೊಳಗೊಂಡ ವಿಶೇಷ ತಂಡ ರಚನೆ

ಕಾಸರಗೋಡು: ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶದಲ್ಲಿ ಈತಿಂಗಳ ೯ರಂದು ಪೊಲೀಸರು ಮಾದಕದ್ರವ್ಯವಾದ 139.29 ಗ್ರಾಂ ಎಂಡಿಎಂಎ ಪತ್ತೆಹಚ್ಚಿದ ಪ್ರಕರಣದ ಮುಂದಿನ  ಹಂತದ ತನಿಖೆಗಾಗಿ  ಡಿವೈಎಸ್ಪಿ ನೇತೃತ್ವದಲ್ಲಿ 17 ಮಂದಿ ಪೊಲೀಸರ ನ್ನೊಳಗೊಂಡ ವಿಶೇಷ ತನಿಖಾ ತಂಡಕ್ಕೆ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ರೂಪು ನೀಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ಎರ್ನಾಕುಳಂ  ಅರಿಕ್ಕಪ್ಪಾಡಿ ಪೂಮಲ ವೆಸ್ಟ್ ವೇಂಙಳ ಪುಳಿಯಾನ್ತೋಟಂ ಅಬ್ದುಲ್ ಸಲಾಂ ಪಿ.ಎ (27), ಎರ್ನಾಕುಳಂ ಅರಿಕ್ಕಪ್ಪಾಡಿ ಪೂಮಲ ಕರಿವಿಳ್ಳಿ ಹೌಸಿನ ಮೊಹಮ್ಮದ್ ಹುಸೈನ್ ಕೆ.ಎಚ್ (28), ಎರ್ನಾಕುಳಂ ಅರಿಕ್ಕಪ್ಪಾಡಿ  ಪೂಮಲ ಕ್ರಷರ್ ಪಾರಾಪುರತ್ತ್ ಪುತ್ತನ್ ಪುರೈಕ್ಕಲ್ ಅಬ್ಬಾಸ್ ಪಿ.ಎ (50), ಎರ್ನಾಕುಳಂ ಪೆರುಂಬಾವೂರು ವಲಿಯಕುಳಂ ಅರಿಕ್ಕ ಪ್ರಾಡಿ ವೆಸ್ಟ್ ವೇಂಙಳ ಎಲಿಂಜಿಕ್ಕಲ್ ಹೌಸ್‌ನ ಸೈನುಲಾಬಿದ್ದೀನ್ ಇ.ಎಸ್ (42) ಮತ್ತು ಅಂಬಲತರ ಬೇಳೂರು ಪಾರಪಳ್ಳಿ  ಹೌಸ್‌ನಮೊಹಮ್ಮದ್  ಸಾಬೀರ್ ಅಲಿಯಾಸ್  ಸಾಬೀರ್ (33) ಎಂಬವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದರಲ್ಲಿ ಮೊಹಮ್ಮದ್ ಸಾಬೀರ್‌ನನ್ನು  ಪೊಲೀಸರು ನಿನ್ನೆಯಷ್ಟೇ ಬಂಧಿಸಿದ್ದರು. ಈತ ಅಂತಾರಾಜ್ಯ ಮಾದಕದ್ರವ್ಯ ಜಾಲದವರೊಂದಿಗೆ  ನಂಟು ಹೊಂದಿ ರುವ ವ್ಯಕ್ತಿಯಾಗಿ ದ್ದಾನಂದೂ, ಇತರ ನಾಲ್ವರು ಆರೋಪಿಗಳನ್ನು ಪ್ರಕರಣದ  ಹೆಚ್ಚಿನ ತನಿಖೆಗಾಗಿ ನ್ಯಾಯಾಲಯದ  ಅನುಮತಿಯೊಂದಿಗೆ ಇಂದು ನ್ಯಾಯಾಂಗ ಬಂಧನದಿಂದ ತಮ್ಮ  ಕಸ್ಟಡಿಗೆ ತೆಗೆದುಕೊಳ್ಳಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page