ಮನೆಗೆ ಅಬಕಾರಿ ದಾಳಿ: 100 ಲೀಟರ್ ಹುಳಿರಸ, 2 ಲೀಟರ್ ಕಳ್ಳಭಟ್ಟಿ ಸಾರಾಯಿ ಪತ್ತೆ: ಓರ್ವ ಸೆರೆ

ಕಾಸರಗೋಡು: ಓಣಂ ಸ್ಪೆಷಲ್ ಡ್ರೈವ್ ಕಾರ್ಯಾಚರಣೆಯಂತೆ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ ಸಿ.ಕೆ.ವಿ.ಸುರೇಶ್ (ಗ್ರೇಡ್) ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಮನೆಯೊಂದರಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಗಾಗಿ ಸಿದ್ಧಪಡಿಸಲಾಗಿದ್ದ 100 ಲೀಟರ್  ಹುಳಿರಸ ಹಾಗೂ ಎರಡು ಲೀಟರ್ ಕಳ್ಳಭಟ್ಟಿ ಸಾರಾಟಿ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ  ಬಳಾಲ್ ಗ್ರಾಮದ  ಕನಕಪಳ್ಳಿ ತಟ್ಟ ನಿವಾಸಿ ಕುಂಞಿ ಕೃಷ್ಣನ್.ಕೆ (54) ಎಂಬಾತನನ್ನು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊ ಳ್ಳಲಾಗಿದೆ.

ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ನೀಲೇಶ್ವರ ರೇಂಜ್ ಎಕ್ಸೈಸ್ ಕಚೇರಿಯ ಗ್ರೇಡ್ ಪ್ರಿವೆಂಟೀವ್ ಆಫೀಸರ್ ರೀನಾ ವಿ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಪ್ರಶಾಂತ್ ಕುಮಾರ್ ಎ.ವಿ,ಅವಿನಾಶ್ ಕುಮಾರ್, ವಿಪಿನ್ ಕುಮಾರ್ ಮತ್ತು ಚಾಲಕ ಶ್ರೀಜೇಶ್ ಎಂಬವರು ಒಳಗೊಂಡಿದ್ದರು.

RELATED NEWS

You cannot copy contents of this page