ಕುಂಬಳೆ: ಮನೆಯಲ್ಲಿ ಬಚ್ಚಿಟ್ಟಿದ್ದ ಮಾದಕವಸ್ತುವಾದ 8.98 ಗ್ರಾಂ ಮೆಥಾಫಿಟಮಿನ್ ಅಬಕಾರಿ ತಂಡ ಓಣಂ ಸ್ಪೆಷಲ್ ಡ್ರೈವ್ ಪ್ರಕಾರ ನಿನ್ನೆ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.
ಇದಕ್ಕೆ ಸಂಬಂಧಿಸಿ ಕುಂಬಳೆ ಮುಖಾರಿಕಂಡ ತಂಶೀರಾ ಮಹಲ್ ವೀಟಿಲ್‌ನ ಮೊಹಮ್ಮದ್ ರಿಸ್ವಾನ್ (27) ಎಂಬಾತನ ವಿರುದ್ಧ ಎನ್‌ಡಿಪಿಎಸ್ ಕಾನೂನು ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಕಾರ್ಯಾಚರಣೆ ವೇಳೆ ಆತ ಮನೆಯಲ್ಲಿ ಇಲ್ಲದ ಕಾರಣ ಆತನನ್ನು ಸೆರೆ ಹಿಡಿಯಲು ಸಾಧ್ಯವಾಗಿಲ್ಲ ವೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಮಾರಾಟಕ್ಕಾಗಿ ಮನೆಯಲ್ಲಿ ಮಾದಕದ್ರವ್ಯ ಬಚ್ಚಿಟ್ಟಿರುವ ಗುಪ್ತ ಮಾಹಿತಿ ಲಭಿಸಿತ್ತೆಂದೂ ಅದರಂತೆ ಆ ಮನೆಗೆ ದಾಳಿ ಮತ್ತು ತಪಾಸಣೆ ನಡೆಸಿ ಮಾಲು ಪತ್ತೆಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟಿ ನರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್‌ನ ಎಕ್ಸೈಸ್ ಇನ್ಸ್‌ಪೆಕ್ಟರ್ ವಿಷ್ಣು ಪ್ರಕಾಶ್‌ರ ನೇತೃತ್ವದಲ್ಲಿ ಪ್ರಿವೆಂಟಿವ್ ಆಫೀಸರ್ ರಂಜಿತ್ ಕೆ.ವಿ, ಗ್ರೇಡ್ ಪ್ರಿವೆಂ ಟಿವ್ ಆಫೀಸರ್ ರೀನಾ ವಿ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಶೈಲೇಶ್ ಕುಮಾರ್, ಶಿಜಿತ್ ವಿ.ವಿ, ವಿಪಿನ್ ಕುಮಾರ್ ಮತ್ತು ಚಾಲಕ ಶ್ರೀಜೇಶ್ ಎಂಬಿವರನ್ನೊಳಗೊಂಡ ಅಬಕಾರಿ ತಂಡ ಈ ಕಾರ್ಯಾಚರಣೆ ನಡೆಸಿದೆ.






