ಕಲ್ಲಗದ್ದೆ- ಸುದೆಂಬಳ ಸಡಕ್ ರಸ್ತೆ  ಶೋಚನೀಯ: ವಾಹನ ಸಂಚಾರಕ್ಕೆ ಸಂಕಷ್ಟ

ಬಾಯಾರು: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಕಲ್ಲಗದ್ದೆ-ನೀರ್ಚಾಲು- ದಳಿಕುಕ್ಕು- ಸುದೆಂಬಳ ವ್ಯಾಪ್ತಿಯ ಸಡಕ್ ರಸ್ತೆ ಹದಗೆಟ್ಟು ಶೋಚನೀಯÁವಸ್ಥೆಯಿಂದ ಕೂಡಿದ್ದು ಸಂಚಾರ ನರಕಯಾತನೆಯÁಗಿದೆ. ಸುಮಾರು ಐದು ಕಿಲೋ ಮೀಟರ್ ಉದ್ದದ ರಸ್ತೆ ಕಳೆದ ಮೂರು ವರ್ಷಗಳಿಂದ ಡಾಮರು ಎದ್ದು ಹೊಂಡ ಸೃಷ್ಟಿಯಾಗಿದೆ. ಬದಿಗಳಲ್ಲಿ ಪೊದೆಗಳು ಆವರಿಸಿ ವಾಹನಗಳ ಸಹಿತ ಸ್ಥಳೀಯರ ಸಂಚಾರÀಕ್ಕೆ ಸಮಸ್ಯೆ ಉಂಟಾಗುತ್ತಿದೆ. ಇಲ್ಲಿ ಸುಮಾರು ೨೦೦ ಮನೆಗಳಿದ್ದು, ಈ ರಸ್ತೆಯಲ್ಲಿ ದಿನನಿತ್ಯ ವಿವಿಧ ಶಾಲಾ ವಾಹನಗಳ ಸಹಿತ ಇತರ ನೂರಾರು ವಾಹನಗಳು ಸಂಚರಿಸುತ್ತಿವೆ. ರಸ್ತೆಯ ಶೋಚನೀಯÁವಸ್ಥೆ ಬಗ್ಗೆ ಈ ಹಿಂದೆ ಊರವರು ಜಿಲ್ಲಾ ಪಂಚಾಯತ್ ಅಧಿಕಾರಿಗಳ, ಪಂಚಾಯತ್ ಅಧಿಕಾರಿಗಳಿಗೆ ದೂರು ನೀಡಲಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಈ ರಸ್ತೆಯಿಂದ ಊರವರು ಮಾತ್ರ ವಲ್ಲದೆ ಕನಿಯಾಲ, ಬಳ್ಳೂರು, ಧರ್ಮತ್ತಡ್ಕ, ಬಾಯಾರು, ಬೆರಿಪದವು, ಮುಳಿಗದ್ದೆ ಪ್ರದೇಶವನ್ನು ಸಂಪರ್ಕಿಸಲು ಹತ್ತಿರದ ರಸ್ತೆಯೂ ಇದಾಗಿದೆ. ಈ ರಸ್ತೆಯನ್ನು ಕೂಡಲೇ ವ್ಯವಸ್ಥಿತ ರೀತಿಯಲ್ಲಿ ಮರು ಡಾಮಾರೀಕರಣಗೊಳಿಸಲು ಅಧಿಕಾರಿಗಳಿಗೆ ಮನವಿಯನ್ನು ನೀಡುವ ಸಲುವಾಗಿ ಊರವರು ಒಟ್ಟು ಸೇರಿ ಸಮಿತಿಯನ್ನು ರಚಿಸಿದ್ದಾರೆ.

You cannot copy contents of this page