ಪೊಡಿಪಳ್ಳ ನಿವಾಸಿ ಯೋಗೀಶ್‌ರ ಮನೆಯ ಮಾಡು ಕುಸಿತ: ಅಪಾರ ನಷ್ಟ

ಮಾರ್ಪನಡ್ಕ: ಕುಂಬ್ಡಾಜೆ ಪಂಚಾಯತ್ ವ್ಯಾಪ್ತಿಯ ಪೊಡಿಪಳ್ಳ ನಿವಾಸಿ ಯೋಗೀಶ್ ಎಂಬವರ ಮನೆ ನಿನ್ನೆ ಕುಸಿದು ಬಿದ್ದಿದೆ. ಹೆಂಚು ಹಾಸಿದ ಮನೆಯ ಮೇಲ್ಛಾವಣಿ ಸಂಪೂರ್ಣವಾಗಿ ಕುಸಿದಿದ್ದು, ಇಲ್ಲಿ ಯಾರೂ ಇಲ್ಲದ ಕಾರಣ ಅನಾಹುತ ತಪ್ಪಿಹೋಗಿದೆ.

ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷೆ ಯಶೋಧ ಎನ್, ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರಿಯಾಂಕ ಎ.ಸಿ, ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿ ಕಾರ್ಯದರ್ಶಿ ಪ್ರಮೋದ್ ಭಂಡಾರಿ, ಸುರೇಶ್, ಭಾಸ್ಕರ ಪೊಡಿಪಳ್ಳ ಭೇಟಿ ನೀಡಿ ವಿಚಾರಿಸಿದರು. ಸಾವಿರಾರು ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

You cannot copy contents of this page