ನಿರ್ಜನ ಹಿತ್ತಿಲಲ್ಲಿ ಬಚ್ಚಿಟ್ಟ 84.400 ಲೀಟರ್ ಆಂಧ್ರ ನಿರ್ಮಿತ ಮದ್ಯ ಪತ್ತೆ

ಕಾಸರಗೋಡು: ಕಾಸರಗೋಡು ಪೊಲೀಸರು ನಡೆಸಿದ ಕಾರ್ಯಾ ಚರಣೆಯಲ್ಲಿ ನಿರ್ಜನ ಹಿತ್ತಿಲಲ್ಲಿ ಬಚ್ಚಿಡಲಾಗಿದ್ದ 84.400 ಲೀಟರ್ ಆಂಧ್ರಪ್ರದೇಶ ನಿರ್ಮಿತ ವಿದೇಶಿ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.

ಕೂಡ್ಲು ಉಳಿಯತ್ತಡ್ಕ-ಚೌಕಿ ರಸ್ತೆಯ ನೇಶನಲ್ ನಗರದಲ್ಲಿರುವ ಗ್ರಾಮ ಕಚೇರಿಗೆ ಸಮೀಪದ ನಿರ್ಜನ ಪ್ರದೇಶದ ಹಿತ್ತಿಲಿನಿಂದ ಪೊಲೀಸರು ಮದ್ಯ ಪತ್ತೆಹಚ್ಚಿದ್ದಾರೆ.  180 ಎಂಎಲ್‌ನ 480 ಬಾಟಲಿ ಮದ್ಯ ಇಲ್ಲಿಂದ ಪತ್ತೆಹಚ್ಚಲಾಗಿದೆ. ಇದನ್ನು 10 ಕಾರ್ಡ್ ಬೋರ್ಡ್ ಪೆಟ್ಟಿಗೆಗಳಲ್ಲಿ ತುಂಬಿಸಿಡಲಾಗಿತ್ತು. ಈ ಮಧ್ಯವನ್ನು  ಹೊರ ರಾಜ್ಯಗಳಿಂದ  ವಾಹನಗಳಲ್ಲಿ  ಇಲ್ಲಿಗೆ ತಂದು ಬಚ್ಚಿಡಲಾಗಿತ್ತೆಂದು ನಂತರ ಅದನ್ನು ಕಿರು ಮದ್ಯ ಮಾರಾಟಗಾರರಿಗೆ  ವಿತರಿಸುವ ಯೋಜನೆಯನ್ನು ಈಮಧ್ಯ ಸಾಗಾಟದವರು ಹಾಕಿಕೊಂಡಿ ದ್ದರೆಂದು ಪೊಲೀಸರು ತಿಳಿಸಿದ್ದಾರೆ.

ಕಾಸರಗೋಡು ಠಾಣೆಯ ಎಸ್‌ಐ ಪಿ.ವಿ. ಮನು ನೇತೃತ್ವದ ಪೊಲೀಸರ ತಂಡ ಈ ಕಾರ್ಯಾಚರಣೆ  ನಡೆಸಿದೆ. ಈ ಪ್ರದೇಶದಲ್ಲಿ ಅಕ್ರಮ ಮದ್ಯ ಸಾಗಾಟದವರ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಿದ್ದು, ಅದರ ಆಧಾರ ದಲ್ಲಿ ತನಿಖೆ ನಡೆಸಲಾಗುತ್ತಿ ದೆಯೆಂದೂ ಪೊಲೀಸರು ತಿಳಿಸಿದ್ದಾರೆ.

You cannot copy contents of this page