ಅಡೂರು: ತೋಟಕ್ಕೆ ತೆರಳಿದ ಗೃಹಿಣಿ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಅಡೂರು ಬಳಿಯ ಮಲ್ಲಂಪಾರೆ ತಿಮ್ಮನಗುಂಡಿ ನಿವಾಸಿ ದಿ| ಚೋಮಣ್ಣ ನಾಯ್ಕ್ರ ಪತ್ನಿ ಗುಲಾಬಿ ಬಾ (68) ನಾಪತ್ತೆಯಾಗಿದ್ದಾರೆ. ನಿನ್ನೆ ಸಂಜೆ ಅಡಿಕೆ ಹೆಕ್ಕಲೆಂದು ಇವರು ತೋಟಕ್ಕೆ ತೆರಳಿದ್ದಾರೆನ್ನಲಾಗಿದೆ. ಅನಂತರ ಮರಳಿ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಮನೆಯವರು ತೋಟಕ್ಕೆ ತೆರಳಿ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಇದೇ ವೇಳೆ ತೋಟದ ಬದಿಯ ತೋಡಿನ ಸಮೀಪ ಗುಲಾಬಿಯವರ ಚಪ್ಪಲಿ ಕಂಡು ಬಂದಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಅಗ್ನಿಶಾಮಕ ದಳ ತಲುಪಿ ಹುಡುಕಾಡಿದರೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಇದರಿಂದ ಇಂದೂ ಕೂಡಾ ಶೋಧ ನಡೆಸಲಾಗುತ್ತಿದೆ.







