ಅಕ್ರಮ ಮರಳುಗಾರಿಕೆ: 2 ಲಾರಿ ವಶ

ಕುಂಬಳೆ: ಹೊಳೆಯಿಂದ ಅಕ್ರಮವಾಗಿ ಹೊಯ್ಗೆ ಹೇರಿಕೊಂಡು ಸಾಗುತ್ತಿದ್ದ ಎರಡು ಲಾರಿಗಳನ್ನು ಕುಂಬಳೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇಚ್ಲಂಗೋಡ್ ಬಿ ಸಿ ರೋಡ್ ಎಂಬಲ್ಲಿಂದ ಶಿರಿಯ ಹೊಳೆಯ ಪಾಚಾನಿಕಡವ್‌ನಿಂದ ಅನಧಿಕೃತ ಹೊಯ್ಗೆ ಹೇರಿ ಸಾಗಿಸುತ್ತಿದ್ದ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡು ಇದಕ್ಕೆ ಸಂಬಂಧಿಸಿ ಲಾರಿ ಚಾಲಕ ಸೇರಿದಂತೆ ಇಬ್ಬರ ವಿರುದ್ಧ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದೇ ಹೊಳೆಯಿಂದ  ಅಕ್ರಮವಾಗಿ ಹೊಯ್ಗೆ ಸಾಗಿಸುತ್ತಿದ್ದ ಇನ್ನೊಂದು ಲಾರಿಯನ್ನು ಸುಬ್ಬಯ್ಯಕಟ್ಟೆಯಿಂದ  ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಆ ಲಾರಿಯ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

You cannot copy contents of this page