ಟಿಪ್ಪರ್ ಲಾರಿ ಮನೆ ಮೇಲೆ ಬಿದ್ದು ಚಾಲಕ ದಾರುಣ ಮೃತ್ಯು

ಹೊಸದುರ್ಗ: ಮಡಿಕೈ ಕಾಞಿರಪೊಯಿಲ್ ಕುಳಂ ಙಾಟ್‌ನಲ್ಲಿ ಟಿಪ್ಪರ್ ಲಾರಿ ನಿಯಂತ್ರಣ ತಪ್ಪಿ ಮನೆಯ ಮೇಲೆ ಬಿದ್ದ ಘಟನೆ ನಡೆದಿದ್ದು, ಈ ದುರಂತದಲ್ಲಿ ಚಾಲಕ ಮೃv ಪಟ್ಟಿದ್ದಾರೆ. ಚಾಯೋಂ ನಿವಾಸಿ ಸಾದಿಕ್ (40) ಮೃತಪಟ್ಟ ಚಾಲಕನಾಗಿದ್ದಾರೆ. ಇಂದು ಬೆಳಿಗ್ಗೆ 7.30ರ ವೇಳೆ ಕಾಞಿರಪೊಯಿಲ್ ಕುಳಂಙಾಟ್‌ನಲ್ಲಿ ಅಪಘಾತ ಸಂಭವಿಸಿದೆ.

ಕೆಂಪುಕಲ್ಲು ಇಳಿಸಿದ ಬಳಿಕ ಲಾರಿಯನ್ನು ಹಿಂದಕ್ಕೆ ತೆಗೆಯುತ್ತಿದ್ದ ಮಧ್ಯೆ ನಿಯಂತ್ರಣ ತಪ್ಪಿದೆ. ಈ ವೇಳೆ ಸಮೀಪದ ಪಿ. ಗೋಪಾಲನ್ ಎಂಬವರ ಮನೆಗೆ ಲಾರಿ ಮಗುಚಿದೆ. ಇದರಿಂದ ಅಡುಗೆ ಕೊಠಡಿ ಭಾಗ ಸಂಪೂರ್ಣ ಹಾನಿಗೊಂಡಿದೆ. ಗಂಭೀರ ಗಾಯಗೊಂಡ ಚಾಲಕ ಸಾದಿಕ್‌ನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.

You cannot copy contents of this page