ಕಲ್ಲಿಕೋಟೆ: ಚೆನ್ನೈ-ಮಂಗಳೂರು ಎಕ್ಸ್ ಪ್ರೆಸ್ ರೈಲಿನಲ್ಲಿ ಸಾಗಿಸುತ್ತಿದ್ದ ೧೯ ಕಿಲೋ ಗಾಂಜಾವನ್ನು ವಶಪಡಿಸಿ ಓರ್ವೆ ಯುವತಿಯನ್ನು ಬಂಧಿಸಲಾಗಿದೆ. ಪಶ್ಚಿಮಬಂಗಾಳ ನೋರ್ತ್ ಫರ್ಹಾನಾಸ್ ನಿವಾಸಿ ಮೀನೋತಿ ಬರ್ದಾರಿ (32) ಎಂಬಾಕೆಯನ್ನು ಆರ್ಪಿಎಫ್ ಹಾಗೂ ರೈಲ್ವೇ ಪೊಲೀಸರು ಸೇರಿ ಬಂಧಿಸಿದ್ದಾರೆ. ಗಾಂಜಾವನ್ನು ಪ್ಯಾಕೆಟ್ಗಳಲ್ಲಿ ತುಂಬಿಸಿ ಸೀಟಿನ ಅಡಿಭಾಗದಲ್ಲಿ ಬಚ್ಚಿಡಲಾಗಿತ್ತು. ಒಡಿಶಾದ ಗ್ರಹಾಂಪುರ ಎಂಬಲ್ಲಿಂದ ಗಾಂಜಾ ತಂದಿರುವುದಾಗಿ ಯುವತಿ ಪೊಲೀಸರಲ್ಲಿ ಹೇಳಿಕೆ ನೀಡಿದ್ದಾಳೆ. ಕೆಲವು ದಿನಗಳ ಹಿಂದೆ 18 ಕಿಲೋ ಗಾಂಜಾ ಸಹಿತ ಇಬ್ಬರು ಯುವಕರನ್ನು ಇದೇ ರೈಲಿನಿಂದ ಬಂಧಿಸಲಾಗಿತ್ತು.






