ಕಾಸರಗೋಡು: ಚೆರ್ಕಳಕ್ಕೆ ಸಮೀಪದ ಪಾಡಿ ಬೆಳ್ಳೂರು ನಗರ ಇಮ್ರಾನ್ ವಳಪ್ಪಿನಲ್ಲಿರುವ ಮನೆಯಿಂದ ಮೊನ್ನೆ ರಾತ್ರಿ ನಾಪತ್ತೆಯಾಗಿದ್ದ ದಾಕ್ಷಾಯಿಣಿ ಅಮ್ಮ (78) ಅವರ ಮೃತದೇಹ ಮನೆ ಸಮೀಪದ ಅಡಿಕೆ ತೋಟದ ಆವರಣವಿಲ್ಲದ ಬಾವಿಯಲ್ಲಿ ಪತ್ತೆಯಾಗಿದೆ. ಮೊನ್ನೆ ರಾತ್ರಿ ಕೊಠಡಿಯಲ್ಲಿ ಮಲಗಿದ್ದ ಇವರು ನಂತರ ನಾಪತ್ತೆಯಾಗಿದ್ದರು. ಅವರಿಗಾಗಿ ಮನೆಯವರು ಊರವರು ಹಾಗೂ ಕಾಸರಗೋಡು ಅಗ್ನಿಶಾಮಕ ದಳದವರು ಅಲ್ಲೇ ಪಕ್ಕದಕೆರೆಗಳಲ್ಲಿ ವ್ಯಾಪಕ ಶೋಧ ನಡೆಸಿದ್ದರೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಆ ಬಳಿಕ ಅಲ್ಲೇ ಪಕ್ಕದ ಕಂಗಿನ ತೋಟದಲ್ಲಿರುವ ಬಾವಿಯಲ್ಲಿ ನಿನ್ನೆ ಸಂಜೆ ಹುಡುಕಾಟ ನಡೆಸಿದಾಗ ಅದರಲ್ಲಿ ದಾಕ್ಷಾಯಿಣಿ ಅಮ್ಮರ ಮೃತದೇಹ ಪತ್ತೆಯಾಗಿದೆ. ಅಗ್ನಿಶಾಮಕ ದಳ ಆಗಮಿಸಿ ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಿದ ಬಳಿಕ ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತು. ವಿದ್ಯಾನಗರ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು.
ದಿ| ಗೋಪಾಲನ್ ನಾಯರ್ರ ಪತ್ನಿಯಾಗಿರುವ ಮೃತರು ಮಕ್ಕಳಾದ ಪಿ.ಎಂ. ಗೋಪಕುಮಾರ್, ಪಿ.ಎಂ. ಉಷಾಕುಮಾರಿ, ಪಿ.ಎಂ. ಅರವಿಂದಾಕ್ಷನ್, ಅಳಿಯಂದಿರಾದ ಕುಂಞಂಬು ನಾಯರ್, ಸುಜೀಶ್, ಸೊಸೆ ಲತ, ಸಹೋದರ ಕೃಷ್ಣನ್ ನಾಯರ್, ಸಹೋದರಿ ಲಕ್ಷ್ಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






