ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ದ್ವಾರದ ಸಮೀಪ ಚರಂಡಿಯ ಅವ್ಯವಸ್ಥೆಯಿಂದ ಸಾರ್ವಜನಿಕರಿಗೆ ಸಮಸ್ಯೆ ಎದುರಾಗಿರುವುದಾಗಿ ದೂರ ಲಾಗಿದೆ. ಚರಂಡಿಗೆ ಪೂರ್ಣವಾಗಿ ಕಬ್ಬಿಣದ ಸರಳು ಅಳವಡಿಸದ ಹಿನ್ನೆಲೆಯಲ್ಲಿ ಈಗಾಗಲೇ ಹಲವರು ಕಾಲು ಸಿಲುಕಿ ಗಾಯಗೊಂಡಿದ್ದಾರೆ. ಇಂದು ಬೆಳಿಗ್ಗೆ ಡಿಸಿಸಿ ಕಾರ್ಯದರ್ಶಿ ಯೂ, ತಾಲೂಕು ಅಭಿವೃದ್ಧಿ ಸಮಿತಿಯ ಸದಸ್ಯನಾದ ಲಕ್ಷ್ಮಣ ಪ್ರಭು (48) ಅವರ ಕಾಲು ಚರಂಡಿಯಲ್ಲಿ ಸಿಲುಕಿ ಗಾಯಗೊಂಡಿದ್ದಾರೆ. ಬಳಿಕ ಇವರಿಗೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಕಾರು ನಿಲ್ಲಿಸಿ ಇಳಿದು ಮುಂದೆ ಸಾಗುತ್ತಿದ್ದಂತೆ ಕಾಲು ಚರಂಡಿಯಲ್ಲಿ ಸಿಲುಕಿಕೊಂಡಿದೆ. ಚರಂಡಿ ನಿರ್ಮಾಣದಲ್ಲಿ ಪಂಚಾಯತ್ಗೆ ಲೋಪವುಂಟಾಗಿದೆ ಯೆಂದು ತಿಳಿಸಿ ಈ ಹಿಂದೆ ತಾಲೂಕು ಅಭಿವೃದ್ಧಿ ಸಮಿತಿಗೆ ಲಕ್ಷ್ಮಣ ಪ್ರಭು ದೂರು ನೀಡಿದ್ದರು. ಆದರೆ ಇದುವರೆಗೆ ಚರಂಡಿ ದುರಸ್ತಿ ಯನ್ನು ಸಮರ್ಪಕಗೊಳಿಸಲು ಸಂಬಂಧಪಟ್ಟ ವರು ಮುಂದಾಗಿಲ್ಲ. ಇದು ಪಾದಚಾರಿಗಳ ಸಹಿತ ಸಾರ್ವ ಜನಿಕರಿಗೆ ಸಮಸ್ಯೆಯಾಗಿ ಪರಿಣಮಿ ಸಿದೆಯೆಂದು ದೂರಲಾಗಿದೆ.






