ಪುತ್ತಿಗೆ: ಕೇರಳ ಮರಾಟಿ ಸಂರಕ್ಷಣಾ ಸಮಿತಿಯ ಪುತ್ತಿಗೆ ಪಂಚಾಯತ್ ದೇರಡ್ಕ ಮಹಮ್ಮಾಯಿ ಮರಾಟಿ ಸಮಿತಿ ಆಶ್ರಯದಲ್ಲಿ ಓಣಂ ಹಬ್ಬದ ಅಂಗವಾಗಿ ಸಮಾಜ ಬಾಂಧವರಿಗೆ ವಿವಿಧ ಆಟೋಟ ಸ್ಪರ್ಧೆ ನಡೆಸಲಾಯಿತು. ಕೃಷ್ಣ ನಾಯ್ಕ ಬೀಡಾರ ಧ್ವಜಾರೋಹಣ ನಡೆಸಿದರು. ಬಳಿಕ ಮಕ್ಕಳಿಗೆ ಹಾಗೂ ಹಿರಿಯರಿಗೆ ವಿವಿಧ ಸ್ಪರ್ಧೆ ನಡೆಯಿತು.
ಸಮಾರೋಪ ಸಮಾರಂಭವನ್ನು ಕೇರಳ ಮರಾಟಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಶ್ಯಾಮ್ ಪ್ರಸಾದ ಮಾನ್ಯ ಉದ್ಘಾಟಿಸಿದರು. ವಾಸು ನಾಯ್ಕ್ ಅಧ್ಯಕ್ಷತೆ ವಹಿಸಿದರು ಸಂರಕ್ಷಣಾ ಸಮಿತಿಯ ಉಪಾಧ್ಯಕ್ಷ ರಾಧಾಕೃಷ್ಣ ಪೈಕ, ಈಶ್ವರ ನಾಯ್ಕ ನೀರೋಳ್ಯ, ಮಾಲಕಿ ಉಮೇಶ್ ಮಾತನಾಡಿದರು. ಹರ್ಷಿತ ಸ್ವಾಗತಿಸಿ, ಆನಂದ ವಂದಿಸಿದರು.







