ಕಾಸರಗೋಡು: ಕನಿಷ್ಠ ಪ್ರಯಾಣ ದರವನ್ನು 15 ರೂಪಾಯಿಗೇರಿಸ ಬೇಕೆಂಬ ಬೇಡಿಕೆಯನ್ನು ಮುಂದಿರಿಸಿ ಕೊಂಡು ರಾಜ್ಯದ ಖಾಸಗಿ ಬಸ್‌ಗಳು ಅನಿರ್ಧಿಷ್ಟಾವಧಿ ಚಳವಳಿ ನಡೆಸಲು ಮಾಲಕರು ನಿರ್ಧರಿಸಿದ್ದಾರೆ. ಚಳವಳಿ ಬಗ್ಗೆ ನಾಳೆ ಘೋಷಿಸಲಾಗುವುದು. ಕೆಎಸ್‌ಆರ್‌ಟಿಸಿಯ ಪ್ರಿಯದರ್ಶಿನಿ ಉಚಿತ ಪ್ರಯಾಣ ಯೋಜನೆ ಯಿಂದಾಗಿ ಖಾಸಗಿ ಸ್ ವಲಯಕ್ಕೆ ಉಂಟಾಗುವ ನಷ್ಟಕ್ಕೆ ಸಂಬಂಧಿಸಿ ಅಧ್ಯಯನ ನಡೆಸಲು ನೇಮಿಸಿದ ತಜ್ಞ ಸಮಿತಿ ಸಲ್ಲಿಸಿದ ವರದಿಯ ಶಿಫಾರಸ್ಸುಗಳು ಸಂಪೂರ್ಣವಲ್ಲವೆಂದು ಖಾಸಗಿ ಬಸ್ ಮಾಲಕರು ತಿಳಿಸಿದ್ದಾರೆ. ಕನಿಷ್ಠ ಪ್ರಯಾಣದರವನ್ನು 15ರೂ.ಗೇರಿಸಬೇಕೆಂಬುವುದಾಗಿದೆ ಬಸ್ ಮಾಲಕರ ಪ್ರಧಾನ ಬೇಡಿಕೆ. ಪ್ರಿಯದರ್ಶಿನಿ ಯೋಜನೆಯನ್ನು ಜ್ಯಾರಿಗೊಳಿಸಿರುವುದರಿಂದ ಖಾಸಗಿ ಬಸ್‌ಗಳಿಗೆ ಉಂಟಾಗಿರುವ ನಷ್ಟವನ್ನು ಭರ್ತಿಗೊಳಿಸಲು ರೂಟ್ ಹಾಗೂ ಸಮಯವನ್ನು ನವೀಕರಿಸಬೇಕೆಂ ಬುದಾಗಿ ತಜ್ಞರ ಸಮಿತಿ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ. ಕೆಎಸ್‌ಆರ್‌ಟಿಸಿ ಶೆಡ್ಯೂಲ್ ಗಳನ್ನು ಪುನರ್ ಕ್ರಮೀಕರಿಸಬೇಕು, ಖಾಸಗಿ ಬಸ್ ಗಳನ್ನು ಗುತ್ತಿಗೆ ಪಡೆಯಬೇಕು ಮೊದಲಾದ ಶಿಫಾರಸ್ಸುಗಳು ವರದಿಯಲ್ಲಿದೆ. ಆದರೆ ಇವು ಯಾವುದೂ ಸೂಕ್ತ ಪರಿಹಾರವಲ್ಲವೆಂ ಬುವುದು ಖಾಸಗಿ ಬಸ್ ಮಾಲಕರು ಅಭಿಪ್ರಾಯಪಟ್ಟಿದ್ದಾರೆ.






