ಬ್ಲಡ್ ಕ್ಯಾನ್ಸರ್ ವಿದ್ಯಾರ್ಥಿನಿ ಮೃತ್ಯು

ಉಪ್ಪಳ: ಪುಳಿಕುತ್ತಿ ಸಮೀಪದ ಅಗರ್ತಿಮೂಲೆ ನಿವಾಸಿ ಪೌಲೋಸ್ ಕೆ.ಪಿ-ಶಾಂತಿ ಡಿಸೋಜಾರ ಪುತ್ರಿ, ವಿದ್ಯಾರ್ಥಿನಿ ನಿಶ್ಮಿತಾ ಕೆ.ಪಿ (18) ನಿಧನ ಹೊಂದಿದರು. ಕಳೆದ ಎಂಟು ತಿಂಗಳಿAದ ಬ್ಲಡ್ ಕ್ಯಾನ್ಸರ್‌ಗೆ ತುತ್ತಾಗಿ ಹಲವಾರು ಕಡೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಕೆಗಾಗಿ ಊರವರು ಹಾಗೂ ಇತರರು ಸೇರಿ ಕೊಂಡು ಸುಮಾರು 140 ಬಾಟ್ಲಿ ರಕ್ತವನ್ನು ನೀಣರುವುದಾಗಿ ಮನೆಯವರು ತಿಳಿಸಿದ್ದಾರೆ. ಆದರೆ ಶುಕ್ರವಾರ ಸಂಜೆ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಈಕೆ ಮಂಗಳೂರಿನ ಬಲ್ಮಠ ಸರಕಾರಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ. ಕಯ್ಯಾರು ಚರ್ಚ್ನಲ್ಲಿ ಶನಿವಾರ ಮಧ್ಯಾಹ್ನ ಅಂತ್ಯಸAಸ್ಕಾರ ನಡೆಯಿತು. ಮೃತರು ತಂದೆ, ತಾಯಿ, ಸಹೋದರಿ ನಿಶಾ, ಸಹೋದರ ನಿಶಾನ್ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

You cannot copy contents of this page