ಪೆರ್ಲ: ಯುವಕನೋರ್ವ ಕಾಡಿನಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಪೆರ್ಲ ಬಳಿಯ ಪಳ್ಳಕಾನದ ಮುರಳಿಮೋಹನ್ (36) ಸಾವಿಗೀಡಾದ ಯುವಕ. ಇವರು ಕೂಲಿ ಕಾರ್ಮಿಕನಾಗಿದ್ದರು. ನೀರ್ಚಾಲು ಬಳಿಯ ಕಾನತ್ತಿಲದಲ್ಲಿರುವ ಪತ್ನಿ ಮನೆಯ ಸಮೀಪ ಕಾಡಿನಲ್ಲಿ ಇವರು ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ರಾಮನಾಯ್ಕ-ಜಯಶ್ರೀ ದಂಪತಿಯ ಪುತ್ರನಾದ ಮತರು ಪತ್ನಿ ರಮ್ಯ ಮಕ್ಕಳಾದ ಅಶ್ವಿನ್, ಕಾರ್ತಿಕ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಘಟನೆ ಬಗ್ಗೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.






