ಮೂನಾಂಕಡವ್‌ನಲ್ಲಿ ಮತ್ತೆ ಅಪಘಾತ : ತರಕಾರಿ ಹೇರಿ ಬರುತ್ತಿದ್ದ ಪಿಕಪ್ ಚರಂಡಿಗೆ

ಕಾಸರಗೋಡು: ಪೆರಿಯ ಮೂನಾಂಕಡವ್‌ನಲ್ಲಿ ಮತ್ತೆ ವಾಹನ ಅಪಘಾತ ಸಂಭವಿಸಿದೆ. ಸುಳ್ಯದಿಂದ ತರಕಾರಿಯೊಂದಿಗೆ ಕಾಞಂಗಾಡ್‌ಗೆ ಆಗಮಿಸುತ್ತಿದ್ದ ಪಿಕಪ್ ಅಪಘಾತಕ್ಕೀ ಡಾಗಿದೆ. ಮೂನಾಂಕಡವ್ ಸೇತುವೆ ದಾಟಿ ಏರು ರಸ್ತೆಯಲ್ಲಿ ಹತ್ತುತ್ತಿದ್ದ ವೇಳೆ ಪಿಕಪ್ ಹಿಂದಕ್ಕೆ ಚಲಿಸಿ ಚರಂಡಿಗೆ ಬಿದ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಪಿಕಪ್‌ನ ಚಕ್ರ ಚರಂಡಿಗೆ ತಾಗಿ ನಿಲ್ಲದಿರುತ್ತಿದ್ದರೆ ಭಾರೀ ದೊಡ್ಡ ಅಪಾಯ ಉಂಟಾಗುತ್ತಿತ್ತೆಂದು ಸ್ಥಳೀಯರು ತಿಳಿಸಿದ್ದಾರೆ.

ಮೂನಾಂಕಡವ್ ಏರು ರಸ್ತೆ ಖಾಯಂ ಅಪಘಾತ ಕೇಂದ್ರವಾಗಿ ಬದಲಾಗಿದೆ ಎಂದು ದೂರಲಾಗಿದೆ. ಇದುವರೆಗೆ ಇಲ್ಲಿ ಸಂಭವಿಸಿದ ಅಪಘಾತಗಳಲ್ಲಿ ೭ ಮಂದಿಗೆ ಜೀವ ನಷ್ಟಗೊಂಡಿದೆ. ಹಲವಾರು ಮಂದಿಗೆ ಗಾಯವುಂಟಾಗಿದೆ. ಇದಕ್ಕೆ ಮೊದಲು ಕೊನೆಯದಾಗಿ ಮಾರ್ಚ್ ೨೩ರಂದು ಅಪಘಾತ  ಸಂಭವಿಸಿದೆ. ಸರಕು ಸಾಗಾಟದ ಲಾರಿ ಮಗುಚಿ ಅಂದು ಅಪಘಾತ ಉಂಟಾಗಿತ್ತು. ಇಲ್ಲಿ ಅಪಘಾತ ನಿತ್ಯಘಟನೆಯಾದ ಹಿನ್ನೆಲೆಯಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಅವೈಜ್ಞಾನಿಕವಾದ ರಸ್ತೆ ನಿರ್ಮಾಣ ಅಪಘಾತಕ್ಕೆ ಕಾರಣವೆಂದು ಸ್ಥಳೀಯರು ನುಡಿಯುತ್ತಾರೆ.

You cannot copy contents of this page