ಬೈಕ್ ಟ್ಯಾಂಕರ್ ಲಾರಿಗೆ ಢಿಕ್ಕಿ: ಇಬ್ಬರಿಗೆ ಗಂಭೀರ

ಮಂಜೇಶ್ವರ: ವಾಮಂಜೂರು ಅಬಕಾರಿ ಚೆಕ್‌ಪೋಸ್ಟ್ ಸಮೀಪ ನಿನ್ನೆ ಸಂಜೆ ಸಂಭವಿಸಿದ ವಾಹನ ಅಪಘಾತದಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಬೈಕ್‌ನಲ್ಲಿ ಸಂಚರಿಸುತ್ತಿದ್ದ ಕೋಡಿಬೈಲು  ಬಳಂಕುಡೆ ನಿವಾಸಿ ಹರೀಶ್ (40), ಚಿಪ್ಪಾರು ಕಡೆಂಕೋಡಿಯ ಕಿರಣ್ (34) ಎಂಬಿವರು ಗಾಯಗೊಂಡಿದ್ದು ಇವರನ್ನು ಮಂಗಳೂರಿನ ವೆನ್ಲಾಕ್ ಆಸತ್ರೆಯಲ್ಲಿ  ದಾಖಲಿಸಲಾಗಿದೆ. ಹರೀಶ್ ಹಾಗೂ ಕಿರಣ್ ಸಂಚರಿಸುತ್ತಿದ್ದ ಬೈಕ್ ಟ್ಯಾಂಕರ್ ಲಾರಿಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ಈ ವೇಳೆ ಹಿಂಬದಿಯಿಂದ ಬಂದ ಕಾರು ಅವರಿಗೆ ಢಿಕ್ಕಿ ಹೊಡೆದಿದೆ. ಹರೀಶ್ ಹಾಗೂ ಕಿರಣ್ ತಲಪ್ಪಾಡಿ ಭಾಗದಿಂದ ಉಪ್ಪಳ ಭಾಗಕ್ಕೆ ಬೈಕ್‌ನಲ್ಲಿ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ.

You cannot copy contents of this page