ಕಾಸರಗೋಡು: ನಗರಸಭೆಯ ಭ್ರಷ್ಟಾಚಾರದ ಆಡಳಿತದಿಂದ ನಗರ ವಾಸಿಗಳು ಸಂಕಷ್ಟಕ್ಕೀಡಾಗಿದ್ದಾರೆಂದು ಆರೋಪಿಸಿ ಬಿಜೆಪಿ ವತಿಯಿಂದ ಪಂಜಿನ ಮೆರವಣಿಗೆ ನಡೆಸಲಾಯಿತು. ಅಭಿವೃದ್ಧಿ ಕುಂಠಿತ, ಶೋಚನೀಯಗೊಂಡ ರಸ್ತೆಗಳು, ಉರಿಯದ ಬೀದಿ ದೀಪಗಳು, ಜನಪರ ಸಮಸ್ಯೆಗಳಿಗೆ ಅವಗಣನೆ ಎಂಬಿವುಗಳ ವಿರುದ್ಧ ಬಿಜೆಪಿ ಕಾಸರಗೋಡು ನಗರಸಭಾ ಸಮಿತಿ ನೇತೃತ್ವದಲ್ಲಿ ಪಂಜಿನ ಮೆರವಣಿಗೆ ನಡೆಸಲಾಯಿತು. ಕರಂದಕ್ಕಾಡಿನಿಂದ ಆರಂಭಗೊಂಡ ಮೆರವಣಿಗೆ ನಗರಸಭಾ ಕಚೇರಿ ಮುಂಭಾಗದಲ್ಲಿ ಸಮಾಪ್ತಿಗೊಂಡಿತು. ಮುಖಂಡರಾದ ಗುರುಪ್ರಸಾದ್ ಪ್ರಭು, ವರಪ್ರಸಾದ್ ಕೋಟೆಕಣಿ, ರವೀಂದ್ರ ಪೂಜಾರಿ, ಶರತ್ ಅಣಂಗೂರು, ವೀಣಾ ಅರುಣ್ ಶೆಟ್ಟಿ, ಶರತ್ ಅಮೈ, ರಾಮ್ಮೋಹನ್, ಕೆ. ಚೇತನ್, ಕೆ.ಆರ್. ಹರೀಶ್, ಉಮಾ ಕಡಪ್ಪುರಂ, ನಗರಸಭಾ ಸದಸ್ಯರು ನೇತೃತ್ವ ನೀಡಿದರು. ಜನಪರ ಸಮಸ್ಯೆಗಳಿಗೆ ಪರಿಹಾರ ಕಾಣದಿದ್ದರೆ ತೀವ್ರವಾದ ಜನಪರ ಆಂದೋಲನಕ್ಕೆ ಬಿಜೆಪಿ ಮುಂದಾಗಲಿದೆಯೆಂದು ಈ ವೇಳೆ ಎಚ್ಚರಿಸಲಾಯಿತು.






