ಯುವತಿ, ಮಗುವಿನ ಕೊಲೆ: ಆರೋಪಿ ಸೆರೆ

ಪಾಲಕ್ಕಾಡ್: ಅಟ್ಟಪ್ಪಾಡಿಯಲ್ಲಿ ಯುವತಿ ಹಾಗೂ ಮಗುವನ್ನು ಕೊಲೆಗೈದ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ. ಪಶ್ಚಿಮ ಬಂಗಾಲ ನಿವಾಸಿಯಾದ ಪ್ರಾವತ್‌ದಾಸ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಭವಾನಿ ಹೊಳೆಯಲ್ಲಿ ಮೃತದೇಹಗಳನ್ನು ಗೋಣಿಚೀಲಗಳಲ್ಲಿ ತುಂಬಿಸಿ ಉಪೇಕ್ಷಿಸಿದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಲಾಗಿದೆ. ಇದೇ ವೇಳೆ ಕೊಲೆಗೀಡಾದ ಯುವತಿ ತನ್ನ ಪತ್ನಿ ಅಲ್ಲವೆಂದೂ, ಎರಡು ತಿಂಗಳಿಂದ ಆಕೆಯೊಂದಿಗೆ ತಾನು ಪರಿಚಯಗೊಂಡಿ ರುವುದಾಗಿ ಆರೋಪಿ ತಿಳಿಸಿದ್ದಾನೆನ್ನಲಾ ಗಿದೆ. ಇದೇ ವೇಳೆ ಕೊಲೆ ಕೃತ್ಯಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ.

ಆರೋಪಿಯನ್ನು ಸಮಗ್ರ ತನಿಖೆಗೊಳಪಡಿಸಿ ಈ ಕುರಿತು ಮಾಹಿತಿ ಸಂಗ್ರಹಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಕೃತ್ಯದ ಬಳಿಕ ಆರೋಪಿ ತಲೆಮರೆಸಿ ಕೊಂಡಿದ್ದನು. ಆರೋಪಿಯ ಕುರಿತು ಮಾಹಿತಿ ಸಂಗ್ರಹಿಸಿದ ಪೊಲೀಸರು ಪಶ್ಚಿಮ ಬಂಗಾಲಕ್ಕೆ ತೆರಳಿ ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

RELATED NEWS

You cannot copy contents of this page