ಬೋವಿಕ್ಕಾನ: ತಿಂಗಳುಗಳ ಅಂತರದಲ್ಲಿ ಮತ್ತೆ ಮುಳಿಯಾರಿನಲ್ಲಿ ಚಿರತೆ ಭೀತಿಯುಂಟಾಗಿದೆ. ಸ್ಕೂಟರ್ ನಲ್ಲಿ ತೆರಳುತ್ತಿದ್ದವರ ಮುಂದೆ ಚಿರತೆ ಹಾರಿರುವುದಾಗಿ ಹೇಳಲಾಗುತ್ತಿದೆ. ನಿನ್ನೆ ರಾತ್ರಿ 7.30ರ ಸುಮಾರಿಗೆ ತೀಯಡ್ಕ- ಕುಟ್ಯಾನಂ ರಸ್ತೆಯಲ್ಲಿ ಚಿರತೆ ಕಂಡುಬಂದಿ ರುವುದಾಗಿ ಹೇಳಲಾಗುತ್ತಿದೆ. ಆಸ್ಪತ್ರೆಯಿಂದ ಸ್ಕೂಟರ್‌ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ನಾಯಿಯನ್ನು ಕಚ್ಚಿಕೊಂಡಿದ್ದ ಚಿರತೆ ಸ್ಕೂಟರ್‌ನ ಮುಂದೆ ಹಾರಿದೆಯೆಂದು ಸವಾರ ಶಿವಪ್ರಿಯ ತಿಳಿಸಿದ್ದಾರೆ. ತಕ್ಷಣ ಸ್ಕೂಟರ್ ನಿಲ್ಲಿ ಸಿದ ಹಿನ್ನೆಲೆಯಲ್ಲಿ ಅವರು ಅಪಾಯ ದಿಂದ ಪಾರಾಗಿರುವುದಾಗಿ ತಿಳಿಸಿ ದ್ದಾರೆ. ಇದಾದ ಬಳಿಕ ಕುಂಞಿಪ್ಪಾರ ಎಂಬಲ್ಲಿಯೂ ಸಾಕುನಾಯಿಯನ್ನು ಚಿರತೆ ಎಳೆದುಕೊಂಡು ಹೋಗುತ್ತಿದ್ದು ದಾಗಿ ವಾಹನದಲ್ಲಿ ಪ್ರಯಾಣಿಸು ತ್ತಿದ್ದವರು ಕಂಡಿದ್ದಾರೆನ್ನಲಾಗಿದೆ. ಮಾಹಿತಿ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತಪಾಸಣೆ ನಡೆಸಿದರು.






