ಕುಂಬಳೆ: ರಾಜ್ಯದಲ್ಲಿ ಇದೀಗ ತೀವ್ರಗೊಂಡ ಅಘೋಷಿತ ವಿದ್ಯುತ್ ಕಡಿತವನ್ನು ಪ್ರತಿಭಟಿಸಿ ಬಿಜೆಪಿ ಕುಂಳೆ ಮಂಡಲ ಸಮಿತಿ ನೇತೃತ್ವದಲ್ಲಿ ಕುಂಬಳೆ ಕೆಎಸ್‌ಇಬಿ ಕಚೇರಿಗೆ ಪಂಜಿನ ಮೆರವಣಿಗೆ ನಡೆಸಲಾಯಿತು. ಕುಂಬಳೆ ಪೇಟೆಯಲ್ಲಿರುವ ಬಿಜೆಪಿ ಪಂಚಾಯತ್ ಸಮಿತಿ ಕಚೇರಿಯಿಂದ ಆರಂಭಗೊಂಡ ಮೆರವಣಿಗೆ ಪೇಟೆ ಸುತ್ತಿ ಕೆಎಸ್‌ಇಬಿ ಕಚೇರಿಗೆ ತಲುಪಿದೆ. ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್ ಮೇಣದ ಬತ್ತಿ ಉರಿಸಿ ಪ್ರತಿಭಟನೆಯನ್ನು ಉದ್ಘಾಟಿ ಸಿದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ವಿ. ರವೀಂದ್ರನ್, ಮಂಡಲ ಅಧ್ಯಕ್ಷ ಬಿ. ವಿಕ್ರಂ ಪೈ, ಉಪಾಧ್ಯಕ್ಷ ಸುಧಾಕರ ಕಾಮತ್, ಕೋಶಾಧಿಕಾರಿ ರಾಧಾಕೃಷ್ಣ ರೈ, ಒಬಿಸಿ ಮೋರ್ಛಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ, ಮಹಿಳಾ ಮೋರ್ಛಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಲತಾ, ಏರಿಯಾ ಸಮಿತಿ ಅಧ್ಯಕ್ಷರಾದ ಸುಜಿತ್ ರೈ ಹಾಗೂ ಶಿವಪ್ರಸಾದ್ ರೈ ನೇತೃತ್ವ ನೀಡಿದರು.





