ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಅನಧಿಕೃತ ನಿರ್ಮಾಣ ಶೀಘ್ರ ತೆರವುಗೊಳಿಸಲು ಕರೆ

ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯ ಕಾಲುದಾರಿಯಲ್ಲಿ  ನಿರ್ಮಿಸಲಾದ ಆಟೋ ರಿಕ್ಷಾ ಸ್ಟ್ಯಾಂಡ್ ಸಹಿತ ಅನಧಿಕೃತ ನಿರ್ಮಾಣಗಳನ್ನು ಕೂಡಲೇ ಸಂಬಂಧಪಟ್ಟವರು ಸ್ವಯಂ ತೆರವುಗೊಳಿಸಬೇಕೆಂದೂ ಇಲ್ಲದಿದ್ದಲ್ಲಿ ಕಾನೂನುಕ್ರಮಗಳನ್ನು ಕೈಗೊಳ್ಳುವುದಾಗಿ ಊರಾಳುಂಗಲ್ ಗುತ್ತಿಗೆ ಕಂಪೆನಿ ತಿಳಿಸಿದೆ.

ತಲಪ್ಪಾಡಿ-ಚೆಂಗಳ ರಾಷ್ಟ್ರೀಯ ಹೆದ್ದಾರಿಯ ಮೊಗ್ರಾಲ್‌ನ ಕಾಲುದಾರಿಯಲ್ಲಿ ಅನಧಿಕೃತವಾಗಿ ಆಟೋ ಸ್ಟ್ಯಾಂಡ್ ನಿರ್ಮಿಸಿರುವು ದನ್ನು ಪತ್ತೆಹಚ್ಚಲಾಗಿದೆಯೆಂದು ಕಂಪೆನಿ ತಿಳಿಸಿದೆ. ಸುಪ್ರೀಂಕೋರ್ಟ್ ಹಾಗೂ ಅಧಿಕಾರಿಗಳ ನಿರ್ದೇಶದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಲ್ಲಿ ನಡೆಸಿದ ಅತಿಕ್ರಮಣಗಳನ್ನು ಕೂಡಲೇ ತೆರವುಗೊಳಿಸಬೇಕೆಂದು ತಿಳಿಸಲಾಗಿದೆ.

You cannot copy contents of this page