ಲಾಡ್ಜ್‌ನಲ್ಲಿ ಯುವತಿಗೆ ದೌರ್ಜನ್ಯ ತಲೆಮರೆಸಿಕೊಂಡಿದ್ದ ಆರೋಪಿ 10 ವರ್ಷಗಳ ಬಳಿಕ ಸೆರೆ

ಮಂಜೇಶ್ವರ:  ಹೊಸಂಗಡಿಯ ಲಾಡ್ಜ್‌ವೊಂದರಲ್ಲಿ ಯುವತಿಗೆ ದೌರ್ಜನ್ಯಗೈದ ಪ್ರಕರಣದ ಆರೋಪಿ ೧೦ ವರ್ಷಗಳ ಬಳಿಕ ಸೆರೆಗೀಡಾಗಿ ದ್ದಾನೆ. ವಯನಾಡು ನಿವಾಸಿಯಾದ ಬಿಜು ಸಿ.ಜೆ ಯಾನೆ  ಆಂಟನಿ ಬಿಜು (44) ಸೆರೆಗೀಡಾದ ಆರೋಪಿಯಾಗಿ ದ್ದಾನೆ.  2016ರಲ್ಲಿ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಯುವತಿ ನೀಡಿದ ದೂರಿನಂತೆ ದೌರ್ಜನ್ಯ ಕೇಸು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಅಂದು ಬಂಧಿಸಿದ್ದರು. ಅನಂತರ ರಿಮಾಂಡ್ ಕಾಲಾವಧಿ ಮುಗಿದು ಹೊರಬಂದ ಆರೋಪಿ  ಬಳಿಕ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಇದೀಗ ಈತನನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಅಧೀ ನದಲ್ಲಿರುವ ಸ್ಕ್ವಾಡ್‌ನ ಸಹಾಯದೊಂದಿಗೆ ಮಂಜೇಶ್ವರ ಪೊಲೀಸರು ಸೆರೆಹಿಡಿ ಯುವಲ್ಲಿ ಯಶಸ್ವಿಯಾಗಿದ್ದಾರೆ.

RELATED NEWS

You cannot copy contents of this page