ಕಾಸರಗೋಡು ಮೀನು ಮಾರುಕಟ್ಟೆ ರಸ್ತೆಯಲ್ಲಿ ಹರಿಯುತ್ತಿದೆ ಮಲಿನ ಜಲ: ಶುಚೀಕರಣ ಮಹತ್ವಕ್ಕೆ ಎಲ್ಲಿದೆ ಬೆಲೆ

ಕಾಸರಗೋಡು: ನವೀಕರಿಸುತ್ತಿರು ವುದರ ಮಧ್ಯೆಯೇ ಕಾಸರಗೋಡು ಮೀನು ಮಾರುಕಟ್ಟೆಯಲ್ಲಿ ತ್ಯಾಜ್ಯ ದಿಂದ ದುಸ್ತರವಾಗುತ್ತಿದೆ. ಮಲಿನ ಜಲವನ್ನು ಮೆಟ್ಟಿಯೇ ಮೀನು ಖರೀ ದಿಸಲು ಜನರು ತಲುಪ ಬೇಕಾದ ದುಸ್ಥಿತಿಯಿದೆ. ಮಲಿನ ಜಲ ಮಾರುಕಟ್ಟೆಯಿಂದ ಹೊರಗೆ ಹರಿಯುತ್ತಿರುವುದು ಸಂಕಷ್ಟ ತಂದಿತ್ತಿದೆ. ಮೀನು ಮಾರಾಟ ಬಳಿಕ ಮಾರುಕಟ್ಟೆಯನ್ನು ಶುಚೀಕರಿಸದಿರುವುದು ಈ ಅವಸ್ಥೆಗೆ ಕಾರಣವೆಂದು ಮೀನು ಖರೀದಿಸಲು ತಲುಪುವರು ತಿಳಿಸುತ್ತಾರೆ. ಮಾರುಕಟ್ಟೆ ಒಳಗೆ ಕಾಲಿಟ್ಟರೆ ದುರ್ವಾಸನೆಗೆ ಕೊರತೆಯಿಲ್ಲ. ಅಲ್ಲಿ ಮಲಿನ ಜಲ ಜೊತೆಗೆ ತ್ಯಾಜ್ಯಗಳು ಸಂಗ್ರಹಗೊಂಡಿವೆ.

ಮೀನು ಮಾರುಕಟ್ಟೆಯನ್ನು ಆಧುನಿಕ ರೀತಿಯಲ್ಲಿ ನಿರ್ಮಿಸುವುದಕ್ಕೆ ನಗರಸಭೆ ಈಗ ಸರಕಾರವನ್ನು ಸಮೀಪಿಸಿದೆ. ಕಳೆದ ವಾರ ಜಿಲ್ಲೆಗೆ ತಲುಪಿದ ಫಿಶರೀಸ್ ಸಚಿವರಿಗೆ ಈ ಬಗ್ಗೆ ಮನವಿ ನೀಡಲಾಗಿದೆ. ಮೀನು ಮಾರುಕಟ್ಟೆಯ ಒಳಗಿರುವ ಮೀನು ಮಾರಾಟ ಕೇಂದ್ರ ಸಹಿತವಿರುವ ಕಟ್ಟಡಗಳೆಲ್ಲ ಶುಚಿತ್ವವಿಲ್ಲದೆ ನೆಲೆಗೊಂಡಿದೆ. ಮೀನು ಮಾರುಕಟ್ಟೆಗೆ ತೆರಳುವ ರಸ್ತೆ ಬದಿಯ ಕಟ್ಟಡಗಳಲ್ಲಿ ಹಲವಾರು ಮಾಂಸದಂಗಡಿಗಳೂ ಇವೆ. ಮಲಿನ ಜಲ ರಸ್ತೆ ಬದಿಗಳಲ್ಲಿ ಹರಿಸುವುದಕ್ಕೆ ದಂಡ ವಸೂಲಿ ಮಾಡುವ ಎನ್‌ಫೋರ್ಸ್‌ಮೆಂಟ್-ಆರೋಗ್ಯ ಇಲಾಖೆ ಅಧಿಕಾರಿಗಳು ಯಾವಾಗಲಾದರೂ ಒಮ್ಮೆ ಕಾಸರಗೋಡು ಮೀನು ಮಾರುಕಟ್ಟೆಯ ರಸ್ತೆಯಲ್ಲಿ ತೆರಳಬೇಕೆಂದು ಮೀನು ಖರೀದಿಸಲು ತಲುಪುವರು ಹೇಳುತ್ತಾರೆ. ಮೀನು ಮಾರುವ ಕಾರ್ಮಿಕರಿಗೆ ಮಾರುಕಟ್ಟೆಯನ್ನು ಸಂಜೆ ವೇಳೆ ಪೂರ್ಣವಾಗಿ ಶುಚಿಗೊಳಿಸಲು ಸಾಧ್ಯವಿದೆ. ಅಲ್ಲದಿದ್ದರೆ ನಗರಸಭೆ ಶುಚೀಕರಣ ಕಾರ್ಮಿಕರಿಂದ ಈ ಕೆಲಸವನ್ನು ನಡೆಸಬಹುದಾಗಿದೆ. ನಗರಸಭೆಗೆ ಶುಚೀಕರಣ ಕಾರ್ಮಿಕರಿದ್ದರೂ ಈ ಕೆಲಸವನ್ನು ಯಾರು ಮಾಡಬೇಕೆಂಬುದು ಪ್ರಶ್ನಾರ್ಥಕವಾಗಿವೆ. ಜಿಲ್ಲಾಡಳಿತ, ಸ್ಥಳೀಯಾಡಳಿತ ಇಲಾಖೆಗಳು ಅಕ್ಟೋಬರ್ ೨ರಂದು ಗಾಂಧಿ ಜಯಂತಿ ದಿನದಂಗವಾಗಿ ನಡೆಸುವ ಶುಚೀಕರಣ ಯಜ್ಞವನ್ನು ಮೀನು ಮಾರುಕಟ್ಟೆಯಿಂದ ಆರಂಭಿಸಿದ್ದರೆ! ಎಂದು ನಗರ ನಿವಾಸಿಗಳು ಆಗ್ರಹಿಸುತ್ತಿದ್ದಾರೆ.

RELATED NEWS

You cannot copy contents of this page