ಬದಿಯಡ್ಕದಲ್ಲಿ ಸೌದೆ ಗೋದಾಮುಗೆ ಕಿಚ್ಚು:  ಅಕ್ರಮಿಯ ದೃಶ್ಯ ಸಿಸಿ ಟಿವಿಯಿಂದ ಲಭ್ಯ

ಬದಿಯಡ್ಕ: ಬದಿಯಡ್ಕದಲ್ಲಿ ಕಟ್ಟಿಗೆ, ಗೋಣಿ ಸಹಿತ ಸಾಮಗ್ರಿಗಳನ್ನು ದಾಸ್ತಾನು ಇರಿಸಿದ್ದ ಗೋದಾಮು ಬೆಂಕಿಗಾಹುತಿಯಾದ ಘಟನೆ ಸಂಭವಿಸಿದೆ. ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಜಿ. ಮುಹಮ್ಮದ್ ಕಾಂತಲ ಎಂಬವರ ಮಾಲಕತ್ವದಲ್ಲಿ ಬದಿಯಡ್ಕ ಪೊಲೀಸ್ ಠಾಣೆ ಸಮೀಪದಲ್ಲಿ  ಕಾರ್ಯಾಚರಿಸುವ ಕಟ್ಟಿಗೆ ಡಿಪ್ಪೋ ಸಹಿತ ಗೋದಾಮಿಗೆ  ಕಿಚ್ಚಿಡಲಾಗಿದೆ. ಗೋದಾಮಿನಲ್ಲಿದ್ದ 10 ಲಕ್ಷ ರೂಪಾಯಿಗಳ  ಗೋಣಿ ಚೀಲ ಗಳು, ಗೂಡ್ಸ್ ಆಟೋ, ಲಕ್ಷಾಂತರ ರೂಪಾಯಿಗಳ ಕಟ್ಟಿಗೆ ಉರಿದು ನಾಶಗೊಂಡಿದೆ. ಇದರಿಂದ ಒಟ್ಟು 20 ಲಕ್ಷರೂಪಾಯಿಗಳ ನಷ್ಟವುಂಟಾಗಿದೆ. ನಿನ್ನೆ ಮುಂಜಾನೆ 4 ಗಂಟೆಗೆ ಘಟನೆ ನಡೆದಿದೆ. ಗೋದಾಮಿನಲ್ಲಿ ಬೆಂಕಿ ಉರಿಯುತ್ತಿರುವುದನ್ನು ಕಂಡ  ಸ್ಥಳೀಯರು, ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದರು. ಕೂಡಲೇ ಕಾಸರಗೋಡಿನಿಂದ ಎರಡು ಘಟಕ ಅಗ್ನಿಶಾಮಕದಳ ತಲುಪಿ ಬೆಂಕಿ ನಂದಿಸಿದೆ. ಅಗ್ನಿಶಾಮಕದಳದ ವಾಹನದಲ್ಲಿದ್ದ ನೀರು ಸಾಕಾಗದೆ ಇದ್ದ್ದಾಗ ಸಮೀಪದ ಬಾವಿಯಿಂದ ನೀರು ಸಂಗ್ರಹಿಸಿ  ಬೆಂಕಿ ನಂದಿಸಲಾಯಿತು.

ಇದೇ ವೇಳೆ ಬೆಂಕಿ ಹಚ್ಚಿದ ವ್ಯಕ್ತಿಯೆಂದು ಸಂಶಯಿಸುವ ಓರ್ವನ ದೃಶ್ಯ ಅಲ್ಲಿನ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅದನ್ನು ಕೇಂದ್ರೀಕರಿಸಿ ತನಿಖೆ ನಡೆಯುತ್ತಿದೆ. ಫಾರೆನ್ಸಿಕ್ ತಜ್ಞರೂ ಸ್ಥಳಕ್ಕೆ ತಲುಪಿ  ಪರಿಶೀಲನೆ ನಡೆಸಿದ್ದಾರೆ.

You cannot copy contents of this page