ಎಸ್‌ಐಆರ್‌ನ್ನು ವಿರೋಧಿಸುವ ವಿ.ಡಿ. ಸತೀಶನ್ ಸರಕಾರ ರಾಜೀನಾಮೆ ನೀಡಿ ಮಾದರಿಯಾಗಬೇಕು-ಶೋಭಾ ಸುರೇಂದ್ರನ್‌ಕಾಸರಗೋಡಿನಲ್ಲಿ : ಬಿಜೆಪಿಯಿಂದ  ಪ್ರತಿಭಟನಾ ಜನಸಭೆ

ಕಾಸರಗೋಡು: ಎಸ್‌ಐಆರ್‌ನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವ ಇಂಡಿಯ ಒಕ್ಕೂಟದ ಮುಖ್ಯಮಂತ್ರಿ ಗಳು  ಹಾಗೂ ಸಚಿವರು ಮೊದಲು ರಾಜೀನಾಮೆ ನೀಡಿ ಮಾದರಿಯಾಗಬೇ ಕೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯ ದರ್ಶಿ ಶೋಭಾ ಸುರೇಂದ್ರನ್ ಒತ್ತಾಯಿ ಸಿದ್ದಾರೆ.  ವಿ.ಡಿ ಸತೀಶನ್ ನೇತೃತ್ವದ  ರಾಜ್ಯ ಸರಕಾರದ ಆಡಳಿತ ವೈಫಲ್ಯ ಹಾಗೂ ಸಮಾಜದಲ್ಲಿ ರಾಜಕೀಯ ಅರಾಜಕತೆ ಸೃಷ್ಟಿಸಲು ಎಲ್‌ಡಿಎಫ್-ಯುಡಿಎಫ್  ಒಕ್ಕೂಟಗಳು ನಡೆಸುತ್ತಿರುವ ಪ್ರಯತ್ನದ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಹಮ್ಮಿಕೊಂಡ ಪ್ರತಿಭಟನೆಯ ಅಂಗ ವಾಗಿ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ  ನಿನ್ನೆ ನಡೆದ ಜನಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.  ವಿಪಕ್ಷಕ್ಕೆ ಅರ್ಹ ಸ್ಥಾನ ನೀಡಲು ಬಿಜೆಪಿ ಸಿದ್ಧವಾಗಿತ್ತು. ಆದರೆ ಪ್ರಧಾನಿ ನಿವಾಸದವರೆಗೆ ಮೆರವಣಿಗೆ ನಡೆಸಿ ಪ್ರಜಾಪ್ರಭುತ್ವದ  ಘನತೆಯನ್ನು ಉಲ್ಲಂಘಿಸಲಾಗಿದೆ ಎಂದು ಅವರು ಆರೋಪಿಸಿದರು. ಶಬರಿಮಲೆಯಲ್ಲಿ ಆಚಾರ ಉಲ್ಲಂಘಿಸಲು ಯತ್ನಿಸಿದಾಗ ನಿಷೇಧಾಜ್ಞೆ ಹೊರಡಿಸಿದ ಕಮ್ಯೂನಿಸ್ಟ್ ಪಕ್ಷ ಹಾಗೂ ಪಿಣರಾಯಿ ವಿಜಯನ್ ಅತೀ ಹೆಚ್ಚು ಭದ್ರತಾ ವಲಯಗಳ ನ್ನೊಳಗೊಂಡ ದೇಶದ ರಾಜಧಾನಿಯ ನಿಯಂತ್ರಣಗಳ ವಿರುದ್ಧ ಪ್ರತಿಭಟಿಸು ವುದು ಹಾಸ್ಯಾಸ್ಪದವಾಗಿದೆ. ಬಿಜೆಪಿ ನಾಯಕರಿಗೆ ಇದಕ್ಕಿಂತಲೂ ತೀವ್ರ ವಾದ ಹಲ್ಲೆ ಹಲವು ಹೋರಾಟಗಳಲ್ಲಿ ಎದುರಾಗಿದ್ದರೂ ಎಂದಿಗೂ  ಪೊಲೀ ಸರ ವಿರುದ್ಧ ತಿರುಗಿ ನಿಲ್ಲಲಿಲ್ಲ ಎಂದು ಶೋಭಾ ಸುರೇಂದ್ರನ್ ತಿಳಿಸಿದರು. ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಪಿಣರಾಯಿ ವಿಜಯನ್ ಹಾಗೂ ಕುಟುಂಬವನ್ನು ಸಂರಕ್ಷಿಸುವ ಹೊಣೆ ಗಾರಿಕೆಯನ್ನು  ವಿ.ಡಿ. ಸತೀಶನ್ ವಹಿಸಿಕೊಂಡಿದ್ದಾರೆಂದು ಶೋಭಾ ಸುರೇಂದ್ರನ್ ಆರೋಪಿಸಿದರು.

ದೆಹಲಿಗೆ ಪ್ರಯಾಣಿಸುತ್ತಿದ್ದ ವೇಳೆ ಕೇರಳದ ಗಡಿ ಪ್ರದೇಶದವರೆಗೆ ಎರಡು ತಂಡಗಳಾಗಿ ಸಂಚರಿಸಿದ ಎಡ-ಐಕ್ಯರಂಗ ಒಕ್ಕೂಟದ ನೇತಾರರು ಕೇರಳವನ್ನು ಬಿಟ್ಟೊಡನೆ  ಒಗ್ಗಟ್ಟಿನಿಂದ ದೆಹಲಿಗೆ ತಲುಪಿ ಮೋದಿ ವಿರುದ್ಧ ಚಳವಳಿಯಲ್ಲಿ ಪಾಲ್ಗೊಂಡಿರು ವುದು ಸ್ವಂತ ಪಕ್ಷದ ಕಾರ್ಯಕರ್ತರಿಗೆ ಎಸಗಿದ ವಂಚನೆಯಾಗಿದೆಯೆಂದು ಅವರು ತಿಳಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್ ಅಧ್ಯಕ್ಷತೆ ವಹಿಸಿದರು.  ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಎಂ. ಸಂಜೀವ ಶೆಟ್ಟಿ, ಕಣ್ಣೂರು ವಲಯ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ರಾಜ್ಯ ಸಮಿತಿ ಸದಸ್ಯರಾದ  ವಿ. ರವೀಂದ್ರನ್, ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ, ಸತೀಶ್ಚಂದ್ರ ಭಂಡಾರಿ, ಸವಿತಾ ಟೀಚರ್, ರವೀಶ ತಂತ್ರಿ ಕುಂಟಾರು, ಪ್ರಮಿಳಾ ಸಿ. ನಾಯ್ಕ್, ಎ. ವೇಲಾಯುಧನ್, ರಾಮಪ್ಪ ಮಂಜೇಶ್ವರ,  ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ. ಆರ್. ಸುನಿಲ್, ಎನ್. ಬಾಬುರಾಜ್, ಮನುಲಾಲ್ ಮೇಲತ್ತ್, ಮಹಿಳಾ ಮೋರ್ಛಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸೀನ ಶಶಿ, ಎಸ್‌ಸಿ ಮೋರ್ಛಾ ರಾಜ್ಯ ಉಪಾಧ್ಯಕ್ಷ ಎ.ಕೆ. ಕಯ್ಯಾರ್, ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜ್ಞಾನಿ ಶ್ಯಾನುಭೋಗ್, ಕಾರಡ್ಕ ಗ್ರಾಮ ಪಂ. ಅಧ್ಯಕ್ಷೆ ಎಂ. ಜನನಿ ಮೊದಲಾದವರು ಮಾತನಾಡಿದರು. ಸಭೆಯ ಮುಂಚಿತ ಕರಂದಕ್ಕಾಡ್‌ನಿಂದ ಬೃಹತ್ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಕಾರ್ಯಕರ್ತರು ಭಾಗವಹಿಸಿದರು.

You cannot copy contents of this page