ಕಾಸರಗೋಡು: ಕಾಸರಗೋಡು ಸಂಯುಕ್ತ ಜಮಾಯತ್ನ ನೂತನ ಖಾಝಿಯಾಗಿ ಸಮಸ್ತ ಕೇರಳ ಜಂಇಯತ್ತುಲ್ ಉಲಮದ ಕಾರ್ಯದರ್ಶಿ ಹಾಗೂ ಧಾರ್ಮಿಕ ಪಂಡಿತರೂ ಆಗಿರುವ ಕೊಯ್ಯೋಡು ಉಮ್ಮರ್ ಮುಸ್ಲಿಯಾರ್ ನಾಳೆ ಸ್ಥಾನ ವಹಿಸಿಕೊಳ್ಳುವರು. ನಾಳೆ ಸಂಜೆ 4 ಗಂಟೆಗೆ ತಳಂಗರೆ ಮಾಲಿಕ್ ದಿನಾರ್ ದೊಡ್ಡ ಜುಮಾ ಮಸೀದಿ ಪರಿಸರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಇವರು ಖಾಝಿ ಸ್ಥಾನ ವಹಿಸಿಕೊಳ್ಳಲಿದ್ದಾರೆ. ಸಮಸ್ತದ ಅಧ್ಯಕ್ಷ ಮುಹಮ್ಮದ್ ಜಫ್ರಿ ಮುತ್ತುಕೋಯ ತಂಙಳ್ ಕಾರ್ಯಕ್ರಮ ಉದ್ಘಾಟಿಸುವರು. ಪಾಣಕ್ಕಾಡ್ ಸಾದಿಕ್ ಅಲಿ ಶಿಹಾಬ್ ತಂಙಳ್ ಖಾಝಿಯವರಿಗೆ ಶಿರೋವಸ್ತ್ರ ತೊಡಿಸಿ ಅನುಗ್ರಹ ಭಾಷಣ ಮಾಡುವರು. ಮಂಗಳೂರು ಖಾಝಿ ನಾಸರ್ ಅಬ್ದುಲ್ ಹಮ್ಜ್ ಶಿಹಾಬ್ ತಂಙಳ್, ಕಲ್ಲಿಕೋಟೆ ಖಾಝಿ ಮುಹಮ್ಮದ್ ಕೋಯ ಜಮಲು ಲೈಲಿ ತಂಙಳ್, ಎಲ್ಪಿಎಂ ಸೈನುಲ್ ಆಬಿದೀನ್ ತಂಙಳ್, ಕೆ.ಎಸ್. ಅಲಿ ತಂ ಙಳ್ ಕುಂಬೋಳ್, ಅಬ್ದುಲ್ ಮಜೀದ್ ಬಾಖವಿ, ಎಂ.ಎಸ್. ಮದನಿ ತಂಙಳ್ ಮೊದಲಾದವರು ಮಾತನಾಡುವರು.






