ಕಾಸರಗೋಡು: ಪೂಜಾ ರಜಾದಿನಗಳಾದ ಅ.೨೦, ೨೧ರಂದು ವಿಶೇಷ ಮತದಾರರ ಪಟ್ಟಿಗೆ ಸಂಬಂಧಿಸಿದ ಎಸ್ಐಆರ್ ಅಭಿಯಾ ನದ ಕಾರ್ಯಚಟುವಟಿಕೆಗಳನ್ನು ನಿಗದಿಪಡಿಸಲಾಗಿದ್ದು, ಇದನ್ನು ಕೈಬಿಡಬೇಕೆಂದು ಬಿಜೆಪಿ ಕಣ್ಣೂರು ವಲಯ ಅಧ್ಯಕ್ಷ ಕೆ. ಶ್ರೀಕಾಂತ್ ಆಗ್ರಹಿಸಿದ್ದಾರೆ. ಈ ಬಗ್ಗೆ ಅವರು ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದ್ದಾರೆ. ವಿಶೇಷ ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರನ್ನು, ಅಗತ್ಯ ತಿದ್ದುಪಡಿಗಳನ್ನು ಕೈಗೊಳ್ಳಲು ಇಂದಿನಿಂದ ೩೧ರವರೆಗೆ ವಿಶೇಷ ಎನ್ರೋಲ್ಮೆಂಟ್ ಅಭಿಯಾನ ನಡೆಸಲು ತೀರ್ಮಾನಿಸಲಾಗಿದೆ. ಪೂಜಾ ರಜಾದಿನಗಳಲ್ಲಿ ಜನರು ಧಾರ್ಮಿಕ ಆಚರಣೆಗಳು ಹಾಗೂ ಕುಟುಂಬ ಕಾರ್ಯಕ್ರಮಗಳಲ್ಲಿ ಭಾಗ ವಹಿಸುವುದರಿಂದಾಗಿ ಅಭಿಯಾನದ ಅಂಗವಾಗಿ ಅಧಿಕಾರಿಗಳು ಸಾರ್ವ ಜನಿಕರನ್ನು ಸಂಪರ್ಕಿಸುವಾಗ ಸಾರ್ವಜನಿರಿಗೆ, ಕಾರ್ಯಕರ್ತರಿಗೆ ಅನಾನುಕೂಲ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಅಕ್ಟೋಬರ್ ೨೦, ೨೧ರಂದು ಅಭಿಯಾನ ಕಾರ್ಯಕ್ರಮ ಗಳನ್ನು ಕೈಬಿಟ್ಟು ಇತರ ದಿನಗಳಲ್ಲಿ ನಡೆಸುವಂತೆ ಶ್ರೀಕಾಂತ್ ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ನಿರ್ದೇಶಗಳನ್ನು ನೀಡಬೇಕು ಎಂದು, ಮತದಾರರನ್ನು ಪಟ್ಟಿಯಲ್ಲಿ ಸೇರಿಸುವ ಪ್ರಕ್ರಿಯೆಯನ್ನು ಸುಗಮವಾಗಿ ಮುಂದುವರಿಸಲು ಕ್ರಮ ಉಂಟಾಗಬೇಕೆಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.






