ಮಂಜೇಶ್ವರ: ಕೊಡ್ಗಮೊಗರು ಗ್ರಾಮದ ಪಿಲಿಕುಂಡ ಕೂಟೇಲು ಬಳಿ ಇರುವ ಕಾಲು ಸೇತುವೆಯ ಆಧಾರಸ್ತಂಭ ಕುಸಿದು ಬಿದ್ದಿದ್ದು, , ಜನರಿಗೆ ಆತಂಕ ಹುಟ್ಟಿಸುತ್ತಿದೆ. ಸೇತುವೆಯ ಆಧಾರಸ್ತಂಭ ಕುಸಿದು ಬಿದ್ದು ವರ್ಷಗಳೇ ಕಳೆದರೂ ಇನ್ನೂ ಕೂಡ ದುರಸ್ತಿಗೊಳಿಸುವ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಳೆದ ವರ್ಷ ಸುರಿದ ಭಾರೀ ಮಳೆಗೆ ಈ ಕಾಲು ಸೇತುವೆಯ ತಳ ಭಾಗದಲ್ಲಿರುವ ಆಧಾರಸ್ತಂಭ ವೊಂದು ಕುಸಿದುಬಿದ್ದಿತ್ತು. ಈ ಕಾಲುಸೇತುವೆಯು ಈ ಭಾಗದ ಪ್ರಮುಖ ಸಂಪರ್ಕ ಮಾರ್ಗ ವಾಗಿದ್ದು ಪ್ರತಿನಿತ್ಯ ನೂರಾರು ಜನರು ಈ ಮುರಿದ ಸೇತುವೆ ಮೇಲೆಯೇ ಓಡಾಟ ನಡೆಸುತ್ತಿದ್ದಾರೆ. ಜತೆಗೆ ಈ ಪ್ರದೇಶದ ಶಾಲಾ ಮಕ್ಕಳು ಕೂಡಾ ಈ ಮುರಿದ ಕಾಲುಸೇತುವೆಯನ್ನೇ ಆಶ್ರಯಿತ್ತಿಸುದ್ದಾರೆ. ಇದರಿಂದ ಭೀತಿ ಹುಟ್ಟಿಸುತ್ತಿಸುದೆ. ಬೊರ್ಕಳ, ಬೂದಿ ಮೂಲೆ ಕಡೆಯಿಂದ ಪಿಲಿಕುಂಡ, ಕಾಯರಡ್ಯ, ಕೊಡ್ಗಮೊಗರು ಸಂಪರ್ಕಿಸುವ ಪ್ರಮುಖ ಸೇತುವೆ ಇದಾಗಿದ್ದು, ಮಳೆಗಾಲದಲ್ಲಿ ಜನರನ್ನು ಇನ್ನಷ್ಟು ಸಂಕಷ್ಟಕ್ಕೆಡು ಮಾಡಿದೆ. ಕೆಲವರು ಅರ್ಧ ಕಿಲೋಮೀಟರ್ ಸಂಚರಿಸಲು ಏಳೆಂಟು ಕಿಲೋ ಮೀಟರ್ ಸುತ್ತು ಬಳಸಿ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯ ಸಂದರ್ಭದಲ್ಲಿ ಈ ಸೇತುವೆಯ ಕೆಳಗೆ ಹೆಚ್ಚಿನ ನೀರು ಹರಿಯುತ್ತಿರುವುದರಿಂದ, ಸೇತುವೆ ಕುಸಿಯುವ ಭೀತಿಯೂ ಎದುರಾಗಿದೆ. ಆದ್ದರಿಂದ ಸಂಬAಧ ಪಟ್ಟವರು ಸಂಭವನೀಯ ದುರಂತ ನಡೆಯುವುದಕ್ಕೂ ಮೊದಲು ಸೇತು ವೆಯನ್ನು ದುರಸ್ತಿ ಮಾಡಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
ಇಲ್ಲಿನ ಪ್ರದೇಶವು ಕೃಷಿಭೂಮಿಯಾಗಿರುವುದರಿಂದ, ಈ ಹಿಂದೆ ಸ್ಥಳೀಯರೊಬ್ಬರು ಸಣ್ಣ ಅಣೆಕಟ್ಟು ನಿರ್ಮಿಸಲು ಕೇಂದ್ರೀಯ ಆ್ಯಪ್ ಮೂಲಕ ಅರ್ಜಿ ಸಲ್ಲಿಸಿ ದ್ದರು. ಬಳಿಕ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಅಣೆಕಟ್ಟು ಕಟ್ಟಲು ಬೇಕಾಗುವಷ್ಟು ಅನುದಾನ ಬ್ಲಾಕ್ ಮಟ್ಟದಲ್ಲಿ ಇಲ್ಲ ಎಂಬ ಕಾರಣವನ್ನು ನೀಡಿ ಕಾಮಗಾರಿಯನ್ನು ಕೈಬಿಟ್ಟಿದ್ದರು. ಒಟ್ಟಿನಲ್ಲಿ ಅಪಾಯ ಎದುರಾಗುವ ಮುನ್ನ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸಂಬAಧಪಟ್ಟವರು ಸೇತುವೆಯನ್ನು ದುರಸ್ತಿ ಮಾಡಬೇಕು ಅಥವಾ ನೂತನ ಸೇತುವೆ ನಿರ್ಮಾಣ ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.





