ಸಹೋದರನ ನಿಧನದ 2 ತಿಂಗಳ ಬಳಿಕ ಕುಸಿದು ಬಿದ್ದು ಯುವಕ ಮೃತ್ಯು

ಮೊಗ್ರಾಲ್ ಪುತ್ತೂರು: ಸಹೋದರ ನಿಧನ ಹೊಂದಿ ಎರಡು ತಿಂಗಳೊಳಗೆ ಈ ಹಿಂದೆ ಕೊಲ್ಲಿಯಲ್ಲಿದ್ದ ಯುವಕ ಊರಿನಲ್ಲಿ ಕೆಲಸದ ಮಧ್ಯೆ ಕುಸಿದು ಬಿದ್ದು ಮೃತಪಟ್ಟರು. ಕಂಬಾರು ನಿವಾಸಿ ಅಶ್ರಫ್ (47) ಮೃತಪಟ್ಟವರು. ನಿನ್ನೆ ಸಂಜೆ 7 ಗಂಟೆಗೆ ಘಟನೆ ನಡೆದಿದೆ. ಕೆಲಸದ ಸ್ಥಳದಲ್ಲಿ ಕುಸಿದು ಬಿದ್ದ ಅಶ್ರಫ್‌ರನ್ನು ಕೂಡಲೇ ಕಾಸರಗೋಡಿನ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಎರಡು ತಿಂಗಳ ಹಿಂದೆ ಸಹೋದರ ಗಫೂರ್ ಮುಂಬೈಯಲ್ಲಿ ಮೃತಪಟ್ಟಿದ್ದರು.

ಮೃತರು ಪತ್ನಿ ರಮ್ಲ, ಮಕ್ಕಳಾದ ರಿಫಾಯಿ, ರಾಹಿದ್, ಆಸಿಯಾ, ಸಲ್ಮಾನ್, ಸಫ್ವಾನ್, ಇತರ ಸಹೋದರರಾದ ಮುಹಮ್ಮದ್, ಸಿದ್ದಿಕ್, ಜಲಾಲ್, ಸಹೋದರಿ ಮಿಸ್ರಿಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page