17ರ ಬಾಲಕಿಗೆ ದೌರ್ಜನ್ಯ: ತಾಯಿಯ ಜೊತೆ ಪರಾರಿ; ಆರೋಪಿ ಜಸಲ್ ತಂಙಳ್ ಮಂಜೇಶ್ವರದಲ್ಲಿ ಸೆರೆ

ಕಾಸರಗೋಡು: ಮಂತ್ರವಾದ ಚಿಕಿತ್ಸೆಯ ಮರೆಯಲ್ಲಿ ಪ್ರಾಯ ಪೂರ್ತಿಯಾಗದ 17ರ ಬಾಲಕಿಯನ್ನು ದೌರ್ಜನ್ಯಗೈದು ಬಳಿಕ ಬಾಲಕಿಯ ತಾಯಿಯ ಜೊತೆ ಪರಾರಿಯಾದ ಉಸ್ತಾದ್‌ನನ್ನು ಮಂಜೇಶ್ವರದಲ್ಲಿ ಪೊಲೀಸರು ಸೆರೆ ಹಿಡಿದಿದ್ದಾರೆ. ಮಲಪ್ಪುರಂ ಎಡವಣ್ಣ ಕುಂಡುತ್ತೋಡ್ ನಿವಾಸಿಯಾದ ಜಸಲ್ ತಂಙಳ್ ಸೆರೆಯಾದ ವ್ಯಕ್ತಿ. ಮಂತ್ರವಾದ ಚಿಕಿತ್ಸೆಗಾಗಿ 17ರ ಬಾಲಕಿಯನ್ನು ತನ್ನ ಮನೆಗೆ ಬಲಹೇಳಿ ದೌರ್ಜನ್ಯ ಗೈದಿರುವುದಾಗಿ ಆರೋಪಿಸಲಾಗಿದೆ. ಚಿಕಿತ್ಸೆ ವೇಳೆ ಜೊತೆಗೆ ಬದ ಬಾಲಕಿಯ ತಾಯಿಯೊಂದಿಗೆ ಸೌಹಾರ್ದ ಸ್ಥಾಪಿಸಿ ಈತ ಬಳಿಕ ಈಕೆಯನ್ನೂ ಸೇರಿಸಿಕೊಂಡು ಪರಾರಿಯಾಗಿದ್ದಾನೆ. ಕೇರಳ- ಕರ್ನಾಟಕ ಗಡಿ ಪ್ರದೇಶವಾದ ಆನೆಕಲ್ಲುನಲ್ಲಿ ಇವರಿಬ್ಬರು ರಹಸ್ಯವಾಗಿ ವಾಸಿಸುತ್ತಿದ್ದಾರೆಂಬ ಮಾಹಿತಿ ಲಭಿಸಿದ ಆಧಾರದಲ್ಲಿ ಮಂಜೇಶ್ವರದಿಂದ ಎಡವಣ್ಣ ಪೊಲೀಸರು ಹಾಗೂ ನಿಲಂಬೂರು ಸ್ಕ್ವಾಡ್ ಜಂಟಿಯಾಗಿ ಸೇರಿ ಆರೋಪಿಯನ್ನು ಕಸ್ಟಡಿಗೆ ತೆಗೆದಿದ್ದಾರೆ.

ಹಲವಾರು ಮಂದಿಗೆ ರೋಗ ವಾಸಿಯಾಗುವುದಕ್ಕಾಗಿ ಮಂತ್ರವಾದ ಚಿಕಿತ್ಸೆ ನೀಡಿದ ವ್ಯಕ್ತಿ ಈತನೆಂದು ಪೊಲೀಸರು ತಿಳಿಸಿದ್ದಾರೆ. ನ್ಯಾಯಾ ಲಯದಲ್ಲಿ ಹಾಜರುಪಡಿಸಿದ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

RELATED NEWS

You cannot copy contents of this page