ತಳಂಗರೆ ಕಡವತ್‌ನಲ್ಲಿ  ಪತ್ತೆಯಾದ ಮೃತದೇಹ ಕುತ್ತಿಗೆಗೆ ಬಟ್ಟೆ ಬಿಗಿದ ಸ್ಥಿತಿಯಲ್ಲಿ:  ಬ್ಯಾಗ್ ಸಹಿತ  ಕೊಠಡಿಯಿಂದ ತೆರಳಿದ ಮೂವರಿಗಾಗಿ ಶೋಧ

ಕಾಸರಗೋಡು:  ತಳಂಗರೆ ಕಡ ವತ್‌ನ ಅಂಗಡಿಯೊಂದರ  ಮೇಲ್ಬಾ ಗದ  ಕೊಠಡಿಯಲ್ಲಿ ಯುವಕನ ಮೃತದೇಹ ಜೀರ್ಣಿಸಿದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ  ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.  ತನಿಖೆಯಂಗವಾಗಿ ಫಾರೆನ್ಸಿಕ್ ತಪಾಸಣೆ ಸಹಿತ ಕ್ರಮಗಳನ್ನು ಪೂರ್ತಿಗೊಳಿಸಲಾ ಗಿದೆ.   ವ್ಯಕ್ತಿಯ ಕುತ್ತಿಗೆಗೆ ಬಟ್ಟೆಯಿಂದ ಬಿಗಿದ ಸ್ಥಿತಿಯಲ್ಲಿ ಮೃತದೇಹ  ಪತ್ತೆಯಾಗಿತ್ತು. ಇದರಿಂದ ಇದು  ಕೊಲೆಕೃತ್ಯವಾಗಿದೆಯೆಂಬ ಸಂಶಯ ಬಲಗೊಂಡಿದೆ. ಮೊನ್ನೆ ಅಪರಾಹ್ನ 3 ಗಂಟೆ ವೇಳೆ ಕಟ್ಟಡದ ಮೇಲಿನ ಮಹಡಿ ಯಲ್ಲಿರುವ ಕೊಠಡಿಯಲ್ಲಿ ಅಪರಿಚಿತ ಯುವಕನ ಮೃತದೇಹ ಪತ್ತೆಯಾಗಿತ್ತು.  ಹೊರಗಿನಿಂದ  ಕೊಠಡಿಯ ಬಾಗಿಲು ಮುಚ್ಚುಗಡೆಗೊಳಿಸಲಾಗಿತ್ತು.ಅಕ್ಟೋಬರ್ ೫ರಂದು ಕರ್ನಾಟಕದ ದಾವಣಗೆರೆ ನಿವಾಸಿಗಳೆಂದು ತಿಳಿಸಿದ ನಾಲ್ಕು ಮಂದಿ ತಂಡ ಕಟ್ಟಡದಲ್ಲಿ ಕೊಠಡಿ ಪಡೆದಿತ್ತೆನ್ನ ಲಾಗಿದೆ. ನಜೀಮ್ ಎಂಬ ವ್ಯಕ್ತಿಯ ಹೆಸರಿನಲ್ಲಿ ಕೊಠಡಿ ಪಡೆಯಲಾಗಿದೆ.  ಈ ನಾಲ್ಕು ಮಂದಿಯಲ್ಲಿ ಒಳಗೊಂಡ ಓರ್ವನ ಮೃತದೇಹ ಇದಾಗಿದೆಯೆಂದು ಸಂಶಯಿಸಲಾಗುತ್ತಿದೆ.  ಪೊಲೀಸರು ತಲುಪಿ ನಡೆಸಿದ ತಪಾಸಣೆ ವೇಳೆ ಕೊಠಡಿಯಲ್ಲಿದ್ದ ಮೂರು ಮಂದಿ ಬ್ಯಾಗ್ ಸಹಿತ ಅಲ್ಲಿಂದ ತೆರಳುವ ದೃಶ್ಯಸಿಸಿ ಟಿವಿಯಲ್ಲಿ ಪತ್ತೆಯಾಗಿದೆ. ಅವರನ್ನು ಪತ್ತೆಹಚ್ಚಿದರೆ ಮಾತ್ರವೇ ಸಾವಿಗೀಡಾದ ವ್ಯಕ್ತಿ ಯಾರೆಂದು ತಿಳಿಯಲು ಸಾಧ್ಯವಿದೆಯೆಂದು ಪೊಲೀಸರು ಹೇಳುತ್ತಿದ್ದಾರೆ.

RELATED NEWS

You cannot copy contents of this page