ಮುಜುಂಗಾವು ಕ್ಷೇತ್ರದಲ್ಲಿ ಸಾವಿರಾರು ಮಂದಿಯಿಂದ ಪವಿತ್ರ ತೀರ್ಥಸ್ನಾನ

ಸೀತಾಂಗೋಳಿ: ಮುಜುಂಗಾವು ಶ್ರೀ ಪಾರ್ಥಸಾರಥಿ ಕ್ಷೇತ್ರದಲ್ಲಿ ತುಲಾ ಸಂಕ್ರಮಣ ಪ್ರಯುಕ್ತ ಇಂದು ತೀರ್ಥಸ್ನಾನ ನಡೆಯುತ್ತಿದೆ.  ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಮಂದಿ ಭಕ್ತರು ಮುಂಜಾನೆಯಿಂದಲೇ ಕ್ಷೇತ್ರಕ್ಕೆ ತಲುಪಿ ತೀರ್ಥಸ್ನಾನದಲ್ಲಿ  ಪಾಲ್ಗೊಳ್ಳುತ್ತಿದ್ದಾರೆ. ಮುಂಜಾನೆ 4 ಗಂಟೆಗೆ ವಾದ್ಯಘೋಷಗಳೊಂದಿಗೆ ದೇವರಿಗೆ ಅಭಿಷೇಕ ನಡೆಸಿದ ಬಳಿಕ ತೀರ್ಥಸ್ನಾನ ಆರಂಭಗೊಂಡಿತು. ಬೆಳ್ತಿಗೆ ಅಕ್ಕಿ ಹಾಗೂ ಹುರುಳಿಯನ್ನು ತಲೆಗೆ ನಿವಾಳಿಸಿ ಕೆರೆಗೆ ಸಮರ್ಪಿಸಿ ಮುಳುಗಿ ಸ್ನಾನ ಮಾಡಿದರೆ ಚರ್ಮರೋಗಗಳ ಸಹಿತ ವಿವಿಧ ರೋಗ ರುಜಿನಗಳು ವಾಸಿಯಾಗುವುದೆಂಬ ನಂಬಿಕೆಯಿದೆ. ತೀರ್ಥಸ್ನಾನದಂಗವಾಗಿ  ಕೆರೆಯ ಸಮೀಪ ಭದ್ರತೆ ಏರ್ಪಡಿಸಲಾಗಿದೆ. ಭಾಗವಹಿಸಿದ ಎಲ್ಲಾ ಭಕ್ತರಿಗೂ  ಕ್ಷೇತ್ರದಲ್ಲಿ ಅನ್ನದಾನ ಏರ್ಪಡಿಸಲಾಗಿದೆ.

RELATED NEWS

You cannot copy contents of this page